ADVERTISEMENT

ಮಧ್ಯಪ್ರದೇಶ: ರೈಲಿನ ಎ.ಸಿ ಬೋಗಿಯಲ್ಲಿ ಗಾಯಗೊಂಡಿದ್ದ ಹುಲಿಮರಿಗಳ ರವಾನೆ

ಪಿಟಿಐ
Published 17 ಜುಲೈ 2024, 15:06 IST
Last Updated 17 ಜುಲೈ 2024, 15:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭೋಪಾಲ್‌: ಮಧ್ಯಪ್ರದೇಶದ ಸೀಹೋರ್ ಜಿಲ್ಲೆಯ ಮಿಡ್‌ಘಾಟ್‌ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಎರಡು ಹುಲಿಮರಿಗಳನ್ನು ಎ.ಸಿ ಬೋಗಿಯ ರೈಲಿನಲ್ಲಿ ಮಂಗಳವಾರ ಭೋಪಾಲ್‌ಗೆ ಕರೆತರಲಾಯಿತು.

‘ರೈಲು ಡಿಕ್ಕಿ ಹೊಡೆದಿದ್ದರಿಂದ 9 ತಿಂಗಳ ಗಂಡುಮರಿಯೊಂದು ರೈಲು ಹಳಿಯ ಬಳಿ ಬಿದ್ದಿತ್ತು. ಇನ್ನುಳಿದ ಎರಡು ಮರಿಗಳು ಹಳಿಯ ಪಕ್ಕದ ಚರಂಡಿಯಲ್ಲಿ ಬಿದ್ದಿದ್ದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ADVERTISEMENT

‘ಸೋಮವಾರ ಹುಲಿಮರಿಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ತಾಯಿಹುಲಿಯು ಘಟನಾ ಸ್ಥಳಕ್ಕೆ ಆಗಮಿಸಿ, ಅಡ್ಡಿ ಉಂಟುಮಾಡಿದ್ದರಿಂದ ಕಾರ್ಯಾಚರಣೆನ್ನು ಮುಂದೂಡಲಾಗಿತ್ತು. ಮಂಗಳವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶುವೈದ್ಯರು ಮತ್ತು ಸತ್ಪುಡ ಹುಲಿ ಸಂರಕ್ಷಣಾ ಪ್ರದೇಶದ ಅಧಿಕಾರಿಗಳು ಎರಡು ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ನಿರ್ದೇಶನದಂತೆ ಪಶ್ಚಿಮ ಕೇಂದ್ರ ರೈಲ್ವೆಯು ಎ.ಸಿ ರೈಲಿನ ವ್ಯವಸ್ಥೆಯನ್ನು ಕಲ್ಪಿಸಿತ್ತು. ಹುಲಿಮರಿಗಳನ್ನು ರೈಲಿನಲ್ಲಿ ಭೋಪಾಲ್‌ನ ಕಮಲಾಪತಿ ರೈಲು ನಿಲ್ದಾಣಕ್ಕೆ ಕರೆತಂದು, ವನ ವಿಹಾರ ರಾಷ್ಟ್ರೀಯ ಉದ್ಯಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಔಷಧಗಳ ಪರಿಣಾಮದಿಂದ ಹುಲಿಮರಿಗಳ ಕಾಲುಗಳು ನಿಸ್ತೇಜಗೊಂಡಿದ್ದು, ಬುಧವಾರ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.