ನವದೆಹಲಿ: ಶನಿವಾರದಿಂದ ಆರಂಭವಾಗಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವು ನಾಯಕರು ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ದೆಹಲಿ ತಲುಪಿದ್ದಾರೆ. ನಾಳೆ ಶೃಂಗಸಭೆಯ ಔಪಚಾರಿಕ ಆರಂಭದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಮತ್ತು ಮಾರಿಷಸ್‌ನ ಪ್ರಧಾನಿಗಳು ಸೇರಿದಂತೆ ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆಯಲ್ಲಿ ತೊಡಗಲಿದ್ದಾರೆ.
G20 ನಾಯಕರಿಗೆ ಭಾರತೀಯ ಸಸ್ಯಾಹಾರಿ ತಿಂಡಿ ತಿನಿಸುಗಳ ಔತಣಕೂಟ ಏರ್ಪಡಿಸಲಾಗಿದೆ.
ಸಲಾಡ್
* ಟಾಸ್ಡ್ ಇಂಡಿಯನ್ ಗ್ರೀನ್ ಸಲಾಡ್
* ಪಾಸ್ತಾ ಮತ್ತು ಬೇಯಿಸಿದ ತರಕಾರಿ ಸಲಾಡ್
* ಕಡಲೆ ಉಸ್ಲಿ
ಸೂಪ್
* ಹುರಿದ ಬಾದಾಮಿ ಮತ್ತು ತರಕಾರಿ ಸಾರು
ಸಸ್ಯಾಹಾರಿ ಮುಖ್ಯ ಆಹಾರ
* ಪನೀರ್ ಲಬಾಬ್ದಾರ್ (ಉತ್ತರ ಪ್ರದೇಶ ಖಾದ್ಯ)
* ಆಲೂಗಡ್ಡೆ ಲಿಯೋನೇಸ್
* ತರಕಾರಿ ಕುರ್ಮಾ (ಆಂಧ್ರ ಪ್ರದೇಶ ಭಕ್ಷ್ಯ)
* ಕಾಜು ಮಟರ್ ಮಖಾನಾ
ದಾಲ್
* ಜವರ್ ದಾಲ್ ತಡ್ಕಾ (ಉತ್ತರ ಪ್ರದೇಶ ಖಾದ್ಯ)
ರೈಸ್
* ಈರುಳ್ಳಿ ಜೀರಾ ಪುಲಾವ್ (ಪಂಜಾಬಿ ಭಕ್ಷ್ಯ)
ಭಾರತದ ತರಹೇವಾರಿ ರೊಟ್ಟಿ
* ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ
ಇತರೆ
* ಸೌತೆಕಾಯಿ ರಾಯಿತ
* ಹುಣಸೆಹಣ್ಣು ಮತ್ತು ಖರ್ಜೂರದ ಚಟ್ನಿ
* ಉಪ್ಪಿನಕಾಯಿ
* ಮೊಸರು
ಸಿಹಿತಿಂಡಿ
* ಕುಟ್ಟು ಮಲ್ಪುವಾ (ಉತ್ತರ ಪ್ರದೇಶದ ವಿಶೇಷ ಸಿಹಿ ತಿಂಡಿ)
* ಕೇಸರ್ ಪಿಸ್ತಾ ರಸಮಲೈ (ಒಡಿಶಾದ ವಿಶೇಷ ಸಿಹಿ ತಿಂಡ)
* ಸ್ಟ್ರಾಬೆರಿ ಐಸ್ ಕ್ರೀಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.