ADVERTISEMENT

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ಡೊಭಾಲ್‌ ಮರುನೇಮಕ

ಪಿಟಿಐ
Published 13 ಜೂನ್ 2024, 16:04 IST
Last Updated 13 ಜೂನ್ 2024, 16:04 IST
ಅಜಿತ್‌ ಡೊಭಾಲ್‌
ಅಜಿತ್‌ ಡೊಭಾಲ್‌   

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ (ಎನ್‌ಎಸ್‌ಎ) ಮಾಜಿ ಐಪಿಎಸ್‌ ಅಧಿಕಾರಿ ಅಜಿತ್‌ ಡೊಭಾಲ್‌ ಅವರನ್ನು ಮರುನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. 

ಸತತ ಮೂರನೇ ಅವಧಿಗೆ ಡೊಭಾಲ್‌ ಅವರು ಎನ್‌ಎಸ್‌ಎ ಆಗಿ ನೇಮಕವಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಡೊಭಾಲ್‌ ಅವರ ಅಧಿಕಾರಾವಧಿ ಇರಲಿದೆ. ಜೂನ್‌ 10ರಿಂದಲೇ ಈ ಆದೇಶ ಜಾರಿಯಲ್ಲಿದೆ ಎಂದು ಹೇಳಲಾಗಿದೆ.

ADVERTISEMENT

ಅಧಿಕಾರಾವಧಿ ವೇಳೆ ಡೊಭಾಲ್‌ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪಿ.ಕೆ. ಮಿಶ್ರಾ ಮರುನೇಮಕ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಐಎಎಸ್‌ ಅಧಿಕಾರಿ ಪಿ.ಕೆ. ಮಿಶ್ರಾ ಅವರನ್ನು ಮರುನೇಮಕ ಮಾಡಲಾಗಿದೆ. ಜೂನ್‌ 10ರಿಂದಲೇ ಈ ಆದೇಶ ಜಾರಿಯಾಗಿದೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ.

ಸಂಪುಟದ ನೇಮಕಾತಿ ಸಮಿತಿಯು ಮಿಶ್ರಾ ಅವರ ನೇಮಕಾತಿಯನ್ನು ಅನುಮೋದಿಸಿದೆ. ಪ್ರಧಾನಿ ಮೋದಿ ಅವರ ಅಧಿಕಾರಾವಧಿ ಇರುವವರೆಗೆ ಅಥವಾ ಮುಂದಿನ ಆದೇಶ ನೀಡುವವರೆಗೆ ಮಿಶ್ರಾ ಅವರ ಅಧಿಕಾರಾವಧಿ ಇರಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.