ಕೊಲಂಬೊ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಈ ವಾರಾಂತ್ಯದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಭಾಗಿಯಾಗಲಿದ್ದಾರೆ.
ಬುಧವಾರ ಸಂಜೆ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿರುವ ವಿಕ್ರಮಸಿಂಘೆ, ಗೆಲುವಿನ ಶುಭಾಶಯ ತಿಳಿಸಿದರು.
‘ಈ ಗೆಲುವು ಮೋದಿಯವರ ನಾಯಕತ್ವದಲ್ಲಿ ಜನರಿಗಿರುವ ವಿಶ್ವಾಸವನ್ನು ತೋರ್ಪಡಿಸುತ್ತದೆ. ಹತ್ತಿರದ ನೆರೆ ರಾಷ್ಟ್ರವಾಗಿ ಭಾರತದೊಂದಿಗೆ ಪಾಲುದಾರಿಕೆ ಗಟ್ಟಿಗೊಳಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದು ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ದೂರವಾಣಿ ಸಂಭಾಷಣೆ ವೇಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಆಹ್ವಾನವನ್ನು ಅಧ್ಯಕ್ಷರಾದ ವಿಕ್ರಮಸಿಂಘೆ ಅವರು ಸ್ವೀಕರಿಸಿದ್ದಾರೆ’ ಎಂದು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.