ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಭಾ ಯಾತ್ರೆಯನ್ನು ಕೈಗೊಳ್ಳುವ ಮೂಲಕ ಅಲ್ಲಿನ ಹಿಂದೂಗಳು ಶ್ರೀರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಶೋಭಾ ಯಾತ್ರೆಯು ಬಿಗಿ ಭದ್ರತೆಯ ನಡುವೆ ಜೈಂದಾರ್ ಮೊಹಲ್ಲಾದಿಂದ ಪ್ರಾರಂಭವಾಯಿತು. ಹಬ್ಬಕದಲ್, ಬಾರ್ಬರ್ಷಾ, ಲಾಲ್ ಚೌಕ್, ಹರಿಸಿಂಗ್ ಹೈ ಸ್ಟ್ರೀಟ್ ಮತ್ತು ಜಹಾಂಗೀರ್ ಚೌಕ್ ಮೂಲಕ ಸಾಗಿದ ಮೆರವಣಿಗೆಯೂ ಟಂಕಿಪೋರಾದಲ್ಲಿ ಮುಕ್ತಾಯವಾಯಿತು.
‘ನಾವು ಕಳೆದ 16 ವರ್ಷಗಳಿಂದ ಶೋಭಾ ಯಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಮೊದಲು ಕಣಿವೆಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದರಿಂದ ಯಾತ್ರೆಯನ್ನು ನಿಲ್ಲಿಸಲಾಗಿತ್ತು’ ಎಂದು ಆಯೋಜಕ ಪವನ್ ಚೆತನ್ಯದಾಸ್ ಹೇಳಿದ್ದಾರೆ.
ನಾವು ಕಾಶ್ಮೀರದ ಜನರ ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತೇವೆ. ರಕ್ತಪಾತವು ಏನನ್ನೂ ನೀಡುವುದಿಲ್ಲವಾದ್ದರಿಂದ ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂದು ಬಯಸುತ್ತೇವೆ. ಮೆರವಣಿಗೆ ನಡೆಸಲು ಬೆಂಬಲ ನೀಡಿದ ಕಾಶ್ಮೀರಿ ಮುಸ್ಲಿಮರು ಮತ್ತು ಕಾಶ್ಮೀರಿ ಪಂಡಿತರಿಗೆ ಪವನ್ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.