ಶ್ರೀನಗರ: ತನ್ನ ವಿಶಿಷ್ಟ ಕರಕುಶಲ ಕಲೆಯಿಂದ ಜಾಗತಿಕ ಮನ್ನಣೆ ಗಳಿಸಿರುವ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ, ಇದೀಗ ‘ವಿಶ್ವ ಕರಕುಶಲ ನಗರಿ’ ಎಂಬ ಗೌರವಕ್ಕೆ ಪಾತ್ರವಾಗಿದೆ.
‘ಈ ಪ್ರತಿಷ್ಠಿತ ಗೌರವವು ಶ್ರೀನಗರದ ಸಾಂಸ್ಕೃತಿಕ ವೈಭವದ ಪರಂಪರೆ ಮತ್ತು ಸ್ಥಳೀಯ ಕುಶಲಕರ್ಮಿಗಳ ವಿಶಿಷ್ಟ ಕೌಶಲದ ಪ್ರತೀಕವಾಗಿದೆ. ಇದು ಸ್ಥಳೀಯ ಕೈಮಗ್ಗ ಹಾಗೂ ಕರಕುಶಲ ವಲಯಕ್ಕೆ ಉತ್ತೇಜನ ನೀಡಲಿದ್ದು, ಆ ಮೂಲಕ ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೂ ಅನುಕೂಲವಾಗಲಿದೆ’ ಎಂದು ವಿಶ್ವ ಕರಕುಶಲ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.
ಶ್ರೀನಗರವು ‘ವಿಶ್ವ ಕರಕುಶಲ ನಗರಿ’ ಮಾನ್ಯತೆ ಪಡೆದಿರುವುದು ಇಲ್ಲಿನ ಸಾಂಸ್ಕೃತಿಕ ವೈಭವ ಹಾಗೂ ಸ್ಥಳೀಯ ಕರಕುಶಲಕರ್ಮಿಗಳ ಪರಿಶ್ರಮಕ್ಕೆ ಸಂದ ಪ್ರತಿಫಲವಾಗಿದೆ. ಇದು ಪರಿವರ್ತನೆಗೆ ನಾಂದಿ ಹಾಡಿದ್ದು, ಸ್ಥಳೀಯ ಕರಕುಶಲಕರ್ಮಿಗಳ ಕೌಶಲ ವಿಕಾಸಕ್ಕಾಗಿ ಅತ್ಯಾಧುನಿಕ ತರಬೇತಿ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ ಎಂದು ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.