ಶ್ರೀನಗರ, ಜಮ್ಮು ಮತ್ತು ಕಾಶ್ಮೀರ (ಪಿಟಿಐ): ಇಲ್ಲಿನ ಇಂದಿರಾ ಗಾಂಧಿ ಟ್ಯುಲಿಪ್ ಉದ್ಯಾನಕ್ಕೆ ಪ್ರವೇಶ ಪುನರಾರಂಭಗೊಂಡ 10 ದಿನಗಳಲ್ಲೇ ಸುಮಾರು 1.35 ಲಕ್ಷ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ.
ದಾಲ್ ಸರೋವರ ಹಾಗೂ ಜಬರ್ವಾನ್ ಹಿಲ್ಸ್ ನಡುವೆ ನಿರ್ಮಿಸಲಾಗಿರುವ ಈ ಉದ್ಯಾನದಲ್ಲಿ ಸುಮಾರು 16 ಲಕ್ಷ ವರ್ಣಗಳ ಹಾಗೂ 68 ವಿಧದ ಟ್ಯುಲಿಪ್ ಹೂವುಗಳನ್ನು ಬೆಳೆಯಲಾಗಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉದ್ಯಾನದ ಮೇಲ್ವಿಚಾರಕ ಇನಾಮ್–ಉಲ್–ರೆಹಮಾನ್ ಅವರು, ‘ಇಲ್ಲಿಯವರೆಗೆ ಉದ್ಯಾನಕ್ಕೆ ಭೇಟಿ ನೀಡಿದವರಲ್ಲಿ ಹೆಚ್ಚಿನವರು ಪ್ರವಾಸಿಗರು. ಸುಮಾರು 1.35 ಲಕ್ಷ ಜನರು ಉದ್ಯಾನಕ್ಕೆ ಬಂದಿದ್ದಾರೆ’ ಎಂದರು.
‘2022ರಲ್ಲಿ 3.60 ಲಕ್ಷ ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಬಳಿಕ ಉದ್ಯಾನಕ್ಕೆ ಭೇಟಿ ನೀಡಿದ ಅತಿ ಹೆಚ್ಚು ಸಂದರ್ಶಕರ ಸಂಖ್ಯೆ ಇದಾಗಿತ್ತು. ಈ ವರ್ಷವೂ ಅತಿ ಹೆಚ್ಚಿನ ಜನ ಉದ್ಯಾನಕ್ಕೆ ಭೇಟಿ ನೀಡುವ ಭರವಸೆ ಇದೆ’ ಎಂದು ರೆಹಮಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.