ನವದೆಹಲಿ: ಆಡಿಟ್ ಬ್ಯೂರೊ ಆಫ್ ಸರ್ಕ್ಯೂಲೇಷನ್ಸ್ (ಎಬಿಸಿ) ನೂತನ ಅಧ್ಯಕ್ಷರಾಗಿ ‘ಆರ್.ಕೆ. ಸ್ವಾಮಿ ಹನ್ಸ ಸಮೂಹ’ದ ಕಾರ್ಯಾಧ್ಯಕ್ಷ ಶ್ರೀನಿವಾಸನ್ ಕೆ. ಸ್ವಾಮಿ ಅವರು 2023–24ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಶ್ರೀನಿವಾಸನ್ ಅವರು ಪ್ರಸ್ತುತ ಏಷ್ಯನ್ ಫೆಡರೇಷನ್ ಆಫ್ ಅಡ್ವರ್ಟೈಸಿಂಗ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಈ ಹಿಂದೆ ಇಂಟರ್‌ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್ (ಐಎಎ), ಐಎಎಯ ಭಾರತ ಚಾಪ್ಟರ್, ಕಾನ್ಫಿಡರೇಷನ್ ಆಫ್ ಏಷ್ಯನ್ ಅಡ್ವರ್ಟೈಸಿಂಗ್ ಏಜೆನ್ಸಿ ಅಸೋಸಿಯೇಷನ್ಸ್, ಅಡ್ವರ್ಟೈಸಿಂಗ್ ಏಜೆನ್ಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ, ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ, ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್, ಮದ್ರಾಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ಮದ್ರಾಸ್ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀನಿವಾಸನ್ ಅವರಿಗೆ ಅಡ್ವರ್ಟೈಸಿಂಗ್ ಏಜೆನ್ಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಎಎಐ) ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.
ಮಲಯಾಳ ಮನೋರಮಾದ ಮುಖ್ಯ ಸಹ ಸಂಪಾದಕ ಮತ್ತು ನಿರ್ದೇಶಕರಾದ ರಿಯಾದ್ ಮ್ಯಾಥ್ಯೂ ಅವರು ಸರ್ವಾನುಮತದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆನೆಟ್, ಕೋಲ್‌ಮನ್ ಅಂಡ್ ಕಂಪನಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮೋಹಿತ್ ಜೈನ್ ಅವರು ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೀಡಿಯಾ ಅಂಡ್ ಒಒಎಚ್ ಆಫ್ ಮ್ಯಾಡಿಸನ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಪಾಲುದಾರರಾದ ವಿಕ್ರಂ ಸುಖುಜಾ ಅವರು ಖಜಾಂಚಿಯಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಎಚ್.ಬಿ.ಮಸಾನಿ ತಿಳಿಸಿದ್ದಾರೆ.
2023–24ನೇ ಸಾಲಿನ ಬ್ಯೂರೊ ಕೌನ್ಸಿಲ್ ಆಫ್ ಮ್ಯಾನೇಜ್‌ಮೆಂಟ್‌ನ ಸದಸ್ಯರು ಜಾಹೀರಾತು ಏಜೆನ್ಸಿಗಳ ಪ್ರತಿನಿಧಿಗಳು
1) ಶ್ರೀನಿವಾಸನ್ ಕೆ. ಸ್ವಾಮಿ ಆರ್.ಕೆ.ಸ್ವಾಮಿ ಲಿಮಿಟೆಡ್– ಅಧ್ಯಕ್ಷ
2) ವಿಕ್ರಂ ಸಖುಜಾ ಮ್ಯಾಡಿಸನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್– ಖಾಜಾಂಚಿ
3) ಪ್ರಶಾಂತ್ ಕುಮಾರ್ ಗ್ರೂಪ್ ಎಂ ಮೀಡಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್
4) ವೈಶಾಲಿ ವರ್ಮಾ ಇನಿಶಿಯೇಟಿವ್ ಮೀಡಿಯಾ (ಇಂಡಿಯಾ) ಪ್ರೈವೇಟ್ ಲಿಮಿಟೆಡ್
ಪ್ರಕಾಶಕರ ಪ್ರತಿನಿಧಿಗಳು
1) ರಿಯಾದ್ ಮ್ಯಾಥ್ಯೂ ಮಲಯಾಳ ಮನೋರಮಾ ಕಂಪನಿ ಲಿಮಿಟೆಡ್– ಉಪಾಧ್ಯಕ್ಷ
2) ಪ್ರತಾಪ್ ಜಿ. ಪವಾರ್ ಸಕಾಲ// ಪೇಪರ್ಸ್ ಪ್ರೈವೇಟ್ ಲಿಮಿಟೆಡ್
3) ಶೈಲೇಶ್ ಗುಪ್ತಾ ಜಾಗರಣ್ ಪ್ರಕಾಶನ ಲಿಮಿಟೆಡ್
4) ಪ್ರವೀಣ್ ಸಮೇಶ್ವರ ಎಚ್‌ಟಿ ಮೀಡಿಯಾ ಲಿಮಿಟೆಡ್
5) ಮೋಹಿತ್ ಜೈನ್ ಬೆನ್ನೆಟ್ ಕೋಲ್‌ಮನ್ ಅಂಡ್ ಕಂಪನಿ ಲಿಮಿಟೆಡ್– ಕಾರ್ಯದರ್ಶಿ
6) ಧೃಬಾ ಮುಖರ್ಜಿ ಎಬಿಪಿ ಪ್ರೈವೇಟ್ ಲಿಮಿಟೆಡ್
7) ಕರಣ್. ದರ್ದಾ ಲೋಕಮತ್// ಮೀಡಿಯಾ ಪ್ರೈವೇಟ್ ಲಿಮಿಟೆಡ್
8) ಗಿರೀಶ್ ಅಗರ್ವಾಲ್ ಡಿ.ಬಿ ಕಾರ್ಪ ಲಿಮಿಟೆಡ್
ಜಾಹೀರಾತು ಪ್ರತಿನಿಧಿಗಳು
1) ಕರುಣೇಶ್ ಬಜಾಜ್ ಐಟಿಸಿ ಲಿಮಿಟೆಡ್
2) ಅನಿರುದ್ಧ ಹಲ್ದಾರ್ ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್
3) ಶಶಾಂಕ್ ಶ್ರೀವಾಸ್ತವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
*ಹಾರ್ಮುಜ್ಡ್ ಮಸಾನಿ– ಪ್ರಧಾನ ಕಾರ್ಯದರ್ಶಿ (ಕಾರ್ಯಾಲಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.