ADVERTISEMENT

ಇಸ್ರೊ ಬೇಹುಗಾರಿಕೆ ಪ್ರಕರಣ; ನಂಬಿ ನಾರಾಯಣ್ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ
Published 15 ನವೆಂಬರ್ 2021, 8:51 IST
Last Updated 15 ನವೆಂಬರ್ 2021, 8:51 IST
ನಂಬಿ ನಾರಾಯಣನ್‌, ಚಿತ್ರ-ಪಿಟಿಐ
ನಂಬಿ ನಾರಾಯಣನ್‌, ಚಿತ್ರ-ಪಿಟಿಐ   

ಕೊಚ್ಚಿ: ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ಅವರುಬೇಹುಗಾರಿಕೆ ಪ್ರಕರಣದಲ್ಲಿಸಿಬಿಐ ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅರೋಪಿಸಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

1994ರ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಜಯನ್‌ ಸೇರಿದಂತೆ ಕೇರಳದ ಪೊಲೀಸ್‌ ಮತ್ತು ಗುಪ್ತಚರ ವಿಭಾಗದ17 ಮಂದಿ ಮಾಜಿ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು,ನಂಬಿ ನಾರಾಯಣನ್ ಅವರು ಸಿಬಿಐ ತನಿಖೆಯ ಮೇಲೆ ಪ್ರಭಾವ ಬೀರಲು ತನಿಖಾಧಿಕಾರಿಗಳೊಂದಿಗೆ ಕೋಟ್ಯಂತರ ಮೌಲ್ಯದ ಭೂ ವ್ಯವಹಾರ ನಡೆಸಿದ್ದಾರೆ ಎಂದು ವಿಜಯನ್‌ ಆರೋಪಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಆರ್. ನಾರಾಯಣ ಪಿಶಾರಡಿ ಅವರು ವಿಜಯನ್ ಅವರ ಮನವಿಯನ್ನು ವಜಾಗೊಳಿಸಿದ್ದಾರೆ.

ವಿಜಯನ್ ಅವರು, ನಾರಾಯಣನ್‌ ಅಥವಾ ಅವರ ಮಗ ತಿರುನಲ್ವೇಲಿ ಜಿಲ್ಲೆಯಲ್ಲಿ ಹಲವು ಎಕರೆಗಳ ಜಮೀನಿನ ಪವರ್ ಆಫ್ ಅಟಾರ್ನಿ ಹೊಂದಿದ್ದಾರೆಂದು ಸಾಬೀತುಪಡಿಸುವ ಸ್ವಾಧೀನ ಪ್ರಮಾಣ ಪತ್ರಗಳನ್ನು ವಿಚಾರಣಾ ನ್ಯಾಯಾಲಯದ ಎದುರು ಸಲ್ಲಿಸಿರುವುದಾಗಿ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ADVERTISEMENT

’ಈ ಜಮೀನನ್ನು ಸಿಬಿಐ ಅಧಿಕಾರಿಗಳಿಗೆ ಮಾರಾಟ ಮಾಡಲಾಗಿದೆ’ ಎಂದು ಆರೋಪಿಸಿದ್ದ ವಿಜಯನ್‌, ಮಾಜಿ ವಿಜ್ಞಾನಿ ಮತ್ತು ಸಿಬಿಐ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ತನಿಖೆಗೆ ಆದೇಶಿಸಲು ಇಷ್ಟು ದಾಖಲೆಗಳು ಸಾಕಾಗುತ್ತವೆ’ ಎಂದು ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.