ADVERTISEMENT

ಡ್ರೈವಿಂಗ್ ಸ್ಕೂಲ್‌ಗಳಿಗೆ ಪರವಾನಗಿ ನೀಡುವ ಅಧಿಕಾರ ರಾಜ್ಯಗಳಿಗಿಲ್ಲ: ಅಲಹಾಬಾದ್ HC

ಪಿಟಿಐ
Published 27 ಅಕ್ಟೋಬರ್ 2024, 16:00 IST
Last Updated 27 ಅಕ್ಟೋಬರ್ 2024, 16:00 IST
.
.   

ಪ್ರಯಾಗ್‌ರಾಜ್‌: ಡ್ರೈವಿಂಗ್‌ ಸ್ಕೂಲ್‌ಗಳಿಗೆ ಪರವಾನಗಿ ನೀಡುವ ಮತ್ತು ನಿಯಂತ್ರಿಸುವ ನಿಯಮಗಳನ್ನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಉತ್ತರ ಪ್ರದೇಶ ಸರ್ಕಾರವು 2023ರಲ್ಲಿ ಖಾಸಗಿ ಮೋಟರು ವಾಹನಗಳ ತರಬೇತಿ ಶಾಲೆಗಳಿಗೆ ( ಡ್ರೈವಿಂಗ್‌ ಸ್ಕೂಲ್‌) ಎಸ್‌ಒಪಿ ಜಾರಿಗೊಳಿಸಿತ್ತು. 

ಇದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಡ್ರೈವಿಂಗ್‌ ಸ್ಕೂಲ್‌ ಮಾಲೀಕರ ಸಂಘ ಹಾಗೂ ಇತರ ಏಳು ಜನರು ಸಲ್ಲಿಸಿದ್ದ ರಿಟ್‌ ಅರ್ಜಿಗೆ ಅನುಮತಿ ನೀಡಿದ ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್‌ ಮಿಶ್ರಾ ಮತ್ತು ಜಯಂತ್ ಬ್ಯಾನರ್ಜಿ ಅವರನ್ನೊಳಗೊಂಡ ಹೈಕೋರ್ಟ್‌ ಪೀಠವು ಸರ್ಕಾರದ ಆದೇಶವನ್ನು ಅ. 25ರಂದು ವಜಾಗೊಳಿಸಿತು.

ADVERTISEMENT

ಮೋಟರು ವಾಹನಗಳ ಚಾಲನೆ ಮತ್ತು ಸಂಬಂಧಿತ ವಿಷಯಗಳಲ್ಲಿ ಪ್ರಮುಖ ಸೂಚನೆಗಳನ್ನು ನೀಡುವುದು ಹಾಗೂ ಶಾಲೆಗಳು ಅಥವಾ ಸಂಸ್ಥೆಗಳಿಗೆ ಪರವಾನಗಿ ನೀಡುವ ಮತ್ತು ನಿಯಂತ್ರಿಸುವ ಉದ್ದೇಶಕ್ಕಾಗಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಮಾತ್ರ ಹೊಂದಿದೆ ಎಂದು ಅರ್ಜಿದಾರರ ಪರ ವಕೀಲರು, ಹೈಕೋರ್ಟ್‌ಗೆ  ವಿವರಣೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.