ADVERTISEMENT

ನಿದ್ರೆಗೆ ಜಾರಿದ ಸ್ಟೇಷನ್‌ ಮಾಸ್ಟರ್‌: ಗ್ರೀನ್ ಸಿಗ್ನಲ್‌ಗೆ ಅರ್ಧ ಗಂಟೆ ಕಾದ ರೈಲು

ಪಿಟಿಐ
Published 4 ಮೇ 2024, 16:14 IST
Last Updated 4 ಮೇ 2024, 16:14 IST
ರೈಲು
ರೈಲು   

ನವದೆಹಲಿ: ‘ಗ್ರೀನ್‌ ಸಿಗ್ನಲ್‌’ ನೀಡಬೇಕಿದ್ದ ಸ್ಟೇಷನ್‌ ಮಾಸ್ಟರ್‌ ಕರ್ತವ್ಯದ ಅವಧಿಯಲ್ಲಿ ನಿದ್ರಿಸಿದ್ದ ಕಾರಣ, ಪಟ್ನಾ– ಕೋಟಾ ಎಕ್ಸ್‌ಪ್ರೆಸ್‌ ರೈಲು ಮೇ 3ರಂದು ಉತ್ತರ ಪ್ರದೇಶದ ಇಟಾವಾ ಬಳಿಯ ಉದಿ ಮೋರ್‌ ರೋಡ್‌ ನಿಲ್ದಾಣದಲ್ಲಿ ಸುಮಾರು ಅರ್ಧ ಗಂಟೆ ಕಾಯಬೇಕಾಯಿತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಗ್ರಾ ರೈಲ್ವೆ ವಲಯವು, ಈ ನಿರ್ಲಕ್ಷ್ಯಕ್ಕೆ ಕಾರಣ ನೀಡುವಂತೆ ಸ್ಟೇಷನ್‌ ಮಾಸ್ಟರ್‌ಗೆ ಸೂಚನೆ ನೀಡಿದೆ.

‘ಸ್ಟೇಷನ್‌ ಮಾಸ್ಟರ್‌ ಅವರಿಂದ ವಿವರಣೆ ಕೇಳಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಆಗ್ರಾ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಶಸ್ತಿ ಶ್ರೀವಾಸ್ತವ ತಿಳಿಸಿದ್ದಾರೆ. 

ADVERTISEMENT

ಈಗಾಗಲೇ ಸ್ಟೇಷನ್‌ ಮಾಸ್ಟರ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಲೋಪಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.