ADVERTISEMENT

‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ: ದಿಲೀಪ್‌ ಘೋಷ್‌

ಪಿಟಿಐ
Published 10 ಸೆಪ್ಟೆಂಬರ್ 2023, 7:49 IST
Last Updated 10 ಸೆಪ್ಟೆಂಬರ್ 2023, 7:49 IST
<div class="paragraphs"><p>ದಿಲೀಪ್‌ ಘೋಷ್‌</p></div>

ದಿಲೀಪ್‌ ಘೋಷ್‌

   

ಕೋಲ್ಕತ್ತ: ‘ಇಂಡಿಯಾವನ್ನು ‘ಭಾರತ’ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ವಿರೋಧಿಸುವವರು ದೇಶ ತೊರೆಯಲಿ’ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹೇಳಿದರು.

ಖರಗ್‌ಪುರ ನಗರದಲ್ಲಿ ನಡೆದ 'ಚಾಯ್ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ, ಕೋಲ್ಕತ್ತಾದಲ್ಲಿರುವ ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುತ್ತೇವೆ' ಎಂದು ಹೇಳಿದರು.

ADVERTISEMENT

ಹಿರಿಯ ಬಿಜೆಪಿ ನಾಯಕ ರಾಹುಲ್ ಸಿನ್ಹಾ ಮಾತನಾಡಿ, ‘ಒಂದು ದೇಶಕ್ಕೆ ಎರಡು ಹೆಸರುಗಳು ಇರಬಾರದು. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ವಿದೇಶ ನಾಯಕರು ಭಾಗವಹಿಸಿದ್ದು, ದೇಶದ ಹೆಸರು ಬದಲಾವಣೆಗೆ ಇದು ಸೂಕ್ತ ಸಮಯವಾಗಿದೆ’ ಎಂದು ತಿಳಿಸಿದರು.

‘ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾಕ್ಕೆ ಹೆದರಿದ ಬಿಜೆಪಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ತಂತ್ರ ಮಾಡಿದೆ’ ಎಂದು ತೃಣಮೂಲ ಕಾಂಗ್ರೆಸ್‌ ವಕ್ತಾರ ಸಂತಾನು ಸೇನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.