ನವದೆಹಲಿ: ಕಾರ್ಪೊರೇಟ್ ದೇಣಿಗೆ ಪಡೆದಿರುವ ವಿಚಾರದಲ್ಲಿ ಬಿಜೆಪಿ ಪಾರಮ್ಯ ಸಾಧಿಸಿದೆ. 2022–23ನೇ ಸಾಲಿನಲ್ಲಿ ಐದು ರಾಷ್ಟ್ರೀಯ ಪಕ್ಷಗಳು ಒಟ್ಟು ₹680.49 ಕೋಟಿ ಮೌಲ್ಯದ ಕಾರ್ಪೋರೇಟ್ ದೇಣಿಗೆ ಸ್ವೀಕರಿಸಿದ್ದು, ಈ ಪೈಕಿ ಶೇ 90ರಷ್ಟು ಪಾಲು ಬಿಜೆಪಿಗೆ ಹೋಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ಕಾಂಗ್ರೆಸ್, ಎಎಪಿ, ಎನ್ಪಿಪಿ ಮತ್ತು ಸಿಪಿಎಂ ಪಕ್ಷಗಳು ಒಟ್ಟಾರೆ ಸ್ವೀಕರಿಸಿದ್ದಕ್ಕಿಂತ 8 ಪಟ್ಟು ಹೆಚ್ಚು ಕಾರ್ಪೊರೇಟ್ ದೇಣಿಗೆಯನ್ನು ಬಿಜೆಪಿ ಸ್ವೀಕರಿಸಿದೆ ಎಂದು ಎಡಿಆರ್ ತಿಳಿಸಿದೆ.
ಇದೇ ಅವಧಿಯಲ್ಲಿ ರಾಷ್ಟ್ರೀಯ ಪಕ್ಷಗಳು 12,167 ದೇಣಿಗೆದಾರರಿಂದ ₹20,000ಕ್ಕಿಂತ ಹೆಚ್ಚು ಸ್ವೀಕರಿಸಿದ ದೇಣಿಗೆಯ ಒಟ್ಟು ಮೊತ್ತ ₹850.43 ಕೋಟಿ. ಈ ಪೈಕಿ ಕಾರ್ಪೋರೇಟ್ ದೇಣಿಗೆ ಪಾಲು ಶೇ 84.81.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.