ADVERTISEMENT

ವಯನಾಡ್‌ ಕಣದಲ್ಲಿ ತರಹೇವಾರಿ ಅಭ್ಯರ್ಥಿಗಳು!

ಶೆಮಿಜ್‌ ಜಾಯ್‌
Published 31 ಅಕ್ಟೋಬರ್ 2024, 17:40 IST
Last Updated 31 ಅಕ್ಟೋಬರ್ 2024, 17:40 IST
<div class="paragraphs"><p>ಪ್ರಿಯಾಂಕಾ ಗಾಂಧಿ</p></div>

ಪ್ರಿಯಾಂಕಾ ಗಾಂಧಿ

   

ಪಿಟಿಐ

ನವದೆಹಲಿ: ತಾನು ಈ ದೇಶ ಪ್ರಧಾನಿ ಆಗಬಹುದು ಎಂದು ಒಬ್ಬ ಅಭ್ಯರ್ಥಿ ಭಾವಿಸಿದ್ದಾರೆ. ಇನ್ನೊಬ್ಬ ಅಭ್ಯರ್ಥಿಯು, ತನಗೆ ಅಮೇಥಿಯಿಂದ ಕಣಕ್ಕೆ ಇಳಿಯಲು ಅವಕಾಶ ಕೊಡಲಿಲ್ಲ, ಹೀಗಾಗಿ ಪ್ರತಿಭಟನೆಯ ರೂಪದಲ್ಲಿ ಇಲ್ಲಿ ಕಣಕ್ಕೆ ಇಳಿದಿರುವುದಾಗಿ ಹೇಳುತ್ತಾರೆ.

ADVERTISEMENT

ದುರ್ಬಲ ಸಮುದಾಯಗಳಿಗೆ ಸೇರಿದವರು ಸಂಸತ್ತಿನಲ್ಲಿ ಇರಬೇಕು ಎಂಬ ಕಾರಣಕ್ಕೆ ಇನ್ನೊಬ್ಬ ಅಭ್ಯರ್ಥಿ ಕಣದಲ್ಲಿದ್ದಾರೆ. ಮತ್ತೊಬ್ಬ ಅಭ್ಯರ್ಥಿಗೆ, ಚುನಾವಣೆಯಲ್ಲಿ ಸೋಲುವುದನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಬಯಕೆ ಇದೆ!

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಿಗದಿಯಾಗಿರುವ ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿಯಲು ಪ್ರಮುಖವಲ್ಲದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಪಕ್ಷೇತರರಿಗೆ ಈ ಬಗೆಯ ಹತ್ತು ಹಲವು ಕಾರಣಗಳಿವೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್ ಮತ್ತು ಸಿಪಿಐ ಅಭ್ಯರ್ಥಿಯಾಗಿ ಸತ್ಯನ್ ಮೊಕೇರಿ ಮಾತ್ರವೇ ಅಲ್ಲದೆ ಇತರ 13 ಮಂದಿ ಕಣದಲ್ಲಿದ್ದಾರೆ. ಈ ಪೈಕಿ 10 ಮಂದಿ ಕೇರಳದ ಹೊರಗಿನವರು. ಕರ್ನಾಟಕದ ಇಬ್ಬರು ಕೂಡ ಕಣದಲ್ಲಿ ಇದ್ದಾರೆ.

2011ರಿಂದ ಈಚೆಗೆ ಐದು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಬರಹಗಾರ್ತಿ, ಬಹುಜನ ದ್ರಾವಿಡ ಪಕ್ಷದ ಎ. ಸೀತಾ ಅವರು ವಯನಾಡ್‌ನಲ್ಲಿ ಕಣದಲ್ಲಿದ್ದಾರೆ. ಸಮಾಜದ ದುರ್ಬಲ ವರ್ಗಗಳ ಜನರ ಪ್ರಾತಿನಿಧ್ಯ ಸಂಸತ್ತಿನಲ್ಲಿ ಇರಬೇಕು ಎಂಬ ಕಾರಣಕ್ಕೆ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ‘ಸಾಮಾಜಿಕ ನ್ಯಾಯ ಬೇಕು ಎಂದು ಕೂಗುತ್ತ ಇದ್ದರೆ ಸಾಕಾಗದು. ಅದನ್ನು ನಾವು ದೇಶದ ಎಲ್ಲ ಕಡೆಯೂ ಖಾತರಿಪಡಿಸಬೇಕು. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು ಎಂಬುದು ನನ್ನ ಗುರಿ’ ಎಂದು ಅವರು ಹೇಳುತ್ತಾರೆ.

ಕಣದಲ್ಲಿ ಇರುವ ಸೋನು ಸಿಂಗ್ ಯಾದವ್ ಅವರಿಗೆ ದೇಶದ ಪ್ರಧಾನಿಯಾಗುವ ಬಯಕೆ ಇದೆ, ಆ ಜವಾಬ್ದಾರಿಯನ್ನು ನಿಭಾಯಿಸಲು ತಾವು ಸಮರ್ಥರಿರುವುದಾಗಿ ಅವರು ಹೇಳುತ್ತಾರೆ.

ಉತ್ತರ ಪ್ರದೇಶದ ಗೋಪಾಲ್ ಸ್ವರೂಪ್ ಗಾಂಧಿ ಅವರು ಮುಂದಿನ ವಾರದ ಆರಂಭದಲ್ಲಿ ವಯನಾಡ್‌ ತಲುಪಲಿದ್ದಾರೆ. ಅಲ್ಲಿ ಚುನಾವಣಾ ಕಣದಲ್ಲಿ ಇರುವ ಅವರು, ಲೋಕಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿಯ ಕಾರಣದಿಂದಾಗಿ ಅಮೇಥಿಯಲ್ಲಿ ಕಣಕ್ಕೆ ಇಳಿಯಲು ಅವಕಾಶ ಸಿಗಲಿಲ್ಲ ಎಂದು ಹೇಳುತ್ತಾರೆ.

ಸೈಬರ್ ಭದ್ರತೆ ವಿಷಯದಲ್ಲಿ ಎಂಟೆಕ್ ಪದವಿ ಪಡೆದಿರುವ ಜಯೇಂದ್ರ ರಾಥೋಡ್ ಅವರು, ಗಾಂಧಿನಗರದಲ್ಲಿ ಅಮಿತ್ ಶಾ ವಿರುದ್ಧ ಸ್ಪರ್ಧಿಸಲು, ವಾರಾಣಸಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಲು ತಮಗೆ ಅವಕಾಶ ಆಗಲಿಲ್ಲ ಎಂದಿದ್ದಾರೆ. ಇವರಿಬ್ಬರ ವಿರುದ್ಧ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದಂತೆ ತಮ್ಮ ಮೇಲೆ ಒತ್ತಡ ಇತ್ತು ಎಂದು ಅವರು ಹೇಳುತ್ತಾರೆ.

ಬೀದರ್‌ನ ಇಸ್ಮಾಯಿಲ್‌ ಜಬಿಉಲ್ಲಾ ಎನ್ನುವವರು ಕೂಡ ಕಣದಲ್ಲಿ ಇದ್ದಾರೆ.

ಕಣದಲ್ಲಿ ಬಳ್ಳಾರಿಯ ರುಕ್ಮಿಣಿ

ಫ್ಯಾಷನ್ ಡಿಸೈನರ್ ಆಗಿರುವ ರುಕ್ಮಿಣಿ ವಯನಾಡ್‌ನಲ್ಲಿ ಕಣಕ್ಕೆ ಇಳಿದಿದ್ದಾರೆ. ಇವರು ಬಳ್ಳಾರಿಯವರು.

ವಯನಾಡ್‌ನಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುವ ಬುಡಕಟ್ಟು ಸಮುದಾಯಗಳ ಜನರನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ಹಿತಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ರುಕ್ಮಿಣಿ ಅವರಿಗೆ ಅನ್ನಿಸಿದೆ.

ಬುಡಕಟ್ಟು ಜನರ ಅಭಿವೃದ್ಧಿಗೆ ಹೆಚ್ಚು ಕೆಲಸ ಮಾಡಲು ಪ್ರಿಯಾಂಕಾ ಅವರಿಂದ ಸಾಧ್ಯವಿಲ್ಲ ಎಂದು ರುಕ್ಮಿಣಿ ಭಾವಿಸಿದ್ದಾರೆ. ‘ಬುಡಕಟ್ಟು ಜನರ ಅಭಿವೃದ್ಧಿಯ ಕೆಲಸ ಮಾಡಲು ಹಾಗೂ ಅವರ ಶೋಷಣೆಯನ್ನು ತಡೆಯಲು ನಾನು ಗಮನ ನೀಡುತ್ತೇನೆ’ ಎಂದು ರುಕ್ಮಿಣಿ ಹೇಳಿದರು.

ಇವರು ಕೆಲವು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆ

(ಈ ವರದಿಗೆ ಚೆನ್ನೈನಿಂದ ಇ.ಟಿ.ಬಿ. ಶಿವಪ್ರಿಯನ್ ಮತ್ತು ನವದೆಹಲಿಯಿಂದ ಅಜಿತ್ ಆತ್ರಾಡಿ ಮಾಹಿತಿ ಒದಗಿಸಿದ್ದಾರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.