ADVERTISEMENT

ಬೀಡಾಡಿ ದನಗಳ ಹಾವಳಿ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಡಿಂಪಲ್ ಯಾದವ್

ಪಿಟಿಐ
Published 29 ಜುಲೈ 2024, 13:02 IST
Last Updated 29 ಜುಲೈ 2024, 13:02 IST
<div class="paragraphs"><p>ಡಿಂಪಲ್ ಯಾದವ್</p></div>

ಡಿಂಪಲ್ ಯಾದವ್

   

ಪಿಟಿಐ

ನವದೆಹಲಿ: ಬೀಡಾಡಿ ದನಗಳ ಹಾವಳಿಯಿಂದ ಇಡೀ ದೇಶವೇ ‘ಚೌಕಿದಾರ್’(ಕಾವಲುಗಾರ) ಆಗಿ ಮಾರ್ಪಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ADVERTISEMENT

ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಬೀಡಾಡಿ ದಳಗಳ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಅವರು ‘ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಬಜೆಟ್‌ನಲ್ಲಿ ಏನಾದರೂ ಅವಕಾಶವಿದೆಯೇ?’ ಎಂದು ಕೇಳಿದರು.

‘ಜಾನುವಾರುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾತ್ರಿ ಹೊತ್ತು ನಿದ್ದೆ ಬಿಟ್ಟು ತಮ್ಮ ಹೊಲಗಳನ್ನು ಕಾಯುವ ಪರಿಸ್ಥಿತಿ ಬಂದಿದೆ. ಬೀಡಾಡಿ ದನಗಳ ಹಾವಳಿಯಿಂದ ಇಡೀ ದೇಶವೇ ‘ಚೌಕಿದಾರ್’ ಆಗಿ ಮಾರ್ಪಟ್ಟಿದೆ’ ಎಂದು ಬಿಜೆಪಿಯ 2019ರ ‘ಮೈ ಭಿ ಚೌಕಿದಾರ್‘(ನಾನೂ ಕಾವಲುಗಾರ) ಪ್ರಚಾರವನ್ನು ಉಲ್ಲೇಖಿಸಿ ಪರೋಕ್ಷವಾಗಿ ಟೀಕಿಸಿದರು.

ಇದೇ ವೇಳೆ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪಿಸಿದ ಡಿಂಪಲ್‌ ಯಾದವ್, 2020–2021ರಲ್ಲಿ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ 700 ರೈತರು ಪ್ರಾಣ ಕಳೆದುಕೊಂಡಿದ್ದಾರೆ. 2014 ರಿಂದ 2022 ರವರೆಗೆ 1 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ವಿಮಾ ಯೋಜನೆಗಳಿಂದ ಎಷ್ಟು ಪ್ರಯೋಜನವಾಗಿದೆ? ಜಾನುವಾರು ಆರ್ಥಿಕತೆ ಕುಸಿಯುತ್ತಿದೆ. ಹಣದುಬ್ಬರ ಏರುತ್ತಿದೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.