ನವದೆಹಲಿ: ನಾಲ್ಕು ವರ್ಷದ ಪದವಿಯಲ್ಲಿ ಶೇ 75ರಷ್ಟು ಅಂಕಗಳು ಇಲ್ಲವೇ ಸಮಾನ ಗ್ರೇಡ್ ಪಡೆದ ವಿದ್ಯಾರ್ಥಿಗಳು ನೇರವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಮತ್ತು ಪಿಎಚ್.ಡಿ ಅಧ್ಯಯನ ಕೈಗೊಳ್ಳಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.
ಈವರೆಗಿನ ವ್ಯವಸ್ಥೆ ಪ್ರಕಾರ, ಎನ್‌ಇಟಿ ಅಧ್ಯಯನ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳನ್ನು ಪಡೆಯಬೇಕಿತ್ತು.
‘ನಾಲ್ಕು ವರ್ಷದ ಪದವಿಯಲ್ಲಿ ಯಾವುದೇ ವಿಷಯಗಳನ್ನು ಅಧ್ಯಯನ ಮಾಡಿದ್ದರೂ, ನಿಗದಿಪಡಿಸಿದ ಅಂಕಗಳು/ಗ್ರೇಡ್ ಪಡೆದ ಅಭ್ಯರ್ಥಿಗಳು ತಾವು ಬಯಸಿದ ಯಾವುದೇ ವಿಷಯದಲ್ಲಿ ಪಿಎಚ್.ಡಿ ಅಧ್ಯಯನ ನಡೆಸಲು ಹಾಗೂ ಎನ್‌ಇಟಿ ಬರೆಯಲು ಅವಕಾಶ ನೀಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
‘ಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಕಲರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗ ಹಾಗೂ ಇತರ ವರ್ಗದ ಅಭ್ಯರ್ಥಿಗಳಿಗೆ ಆಯಾ ಸಮಯಕ್ಕೆ ಯುಜಿಸಿ ಕೈಗೊಂಡ ನಿರ್ಧಾರದ ಪ್ರಕಾರ ಅಂಕಗಳಲ್ಲಿ ಶೇ 5ರಷ್ಟು ವಿನಾಯಿತಿ ನೀಡಲಾಗುವುದು’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.