ADVERTISEMENT

ನಾನು ಚೌಕೀದಾರ್ ಆಗಲಾರೆ, ನಾನು ಬ್ರಾಹ್ಮಣ: ಸುಬ್ರಮಣಿಯನ್ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 12:47 IST
Last Updated 24 ಮಾರ್ಚ್ 2019, 12:47 IST
   

ಚೆನ್ನೈ: ನೀವು ನಿಮ್ಮ ಹೆಸರಿನ ಮುಂದೆ ಚೌಕೀದಾರ್ ಎಂದು ಯಾಕೆ ಸೇರಿಸಿಲ್ಲ ಎಂಬ ಪ್ರಶ್ನೆಯನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಲ್ಲಿ ಕೇಳಿದಾಗ 'ನಾನು ಚೌಕೀದಾರ್ಆಗಲಾರೆ. ಯಾಕೆಂದರೆ ನಾನು ಬ್ರಾಹ್ಮಣ, ಬ್ರಾಹ್ಮಣರು ಚೌಕೀದಾರ್ ಆಗಲಾರರು. ಇದು ಸತ್ಯ.ಚೌಕೀದಾರ್ ಏನು ಮಾಡಬೇಕು ಎಂಬ ಆದೇಶವನ್ನು ಮಾತ್ರ ನಾನು ನೀಡುತ್ತೇನೆ.ಚೌಕೀದಾರ್ ನಾವು ಹೇಳಿದಂತೆ ಕೇಳಬೇಕು ಎಂದೇ ಎಲ್ಲರು ಬಯಸುತ್ತಾರೆ. ಹಾಗಾಗಿ ನಾನು ಚೌಕೀದಾರ್ ಆಗಲ್ಲ' ಎಂದಿದ್ದಾರೆ.

ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಾಮಿ ಈ ರೀತಿ ಹೇಳಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮೈ ಭೀ ಚೌಕೀದಾರ್ ಎಂಬ ಅಭಿಯಾನವನ್ನು ಬಿಜೆಪಿ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆ ಹೆಸರು ಚೌಕೀದಾರ್ ನರೇಂದ್ರ ಮೋದಿ ಎಂದು ಬದಲಿಸುವ ಮೂಲಕ ಚೌಕೀದಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.