ADVERTISEMENT

ಕಕ್ಷೆಗೆ ಸೇರಿದ ಚಂದ್ರಯಾನ–3: ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2023, 9:44 IST
Last Updated 14 ಜುಲೈ 2023, 9:44 IST
ಸತೀಶ್‌ ಧವನ್ ಉಡ್ಡಯನ ಕೇಂದ್ರದಿಂದ ಆಕಾಶಕ್ಕೆ ಹಾರಿದ ರಾಕೆಟ್
ಸತೀಶ್‌ ಧವನ್ ಉಡ್ಡಯನ ಕೇಂದ್ರದಿಂದ ಆಕಾಶಕ್ಕೆ ಹಾರಿದ ರಾಕೆಟ್   

ಶ್ರೀಹರಿಕೋಟಾ: ಚಂದ್ರಯಾನ–3ಕ್ಕೆ ನಿಯೋಜನೆಗೊಂಡಿದ್ದ ಮಾರ್ಕ್‌–3 ರಾಕೆಟ್‌ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ ವ್ಯಕ್ತಪಡಿಸಿದ್ದಾರೆ.

ಎಲ್‌ವಿಎಂ3– ಮಾರ್ಕ್‌3 ಅತ್ಯಂತ ಯಶಸ್ವಿಯಾಗಿ ಲ್ಯಾಂಡರ್ ಹಾಗೂ ರೋವರ್‌ ಹೊತ್ತ ಘಟಕವನ್ನು ನಿಗದಿತ ಕಕ್ಷೆಗೆ ಸೇರಿಸಿದೆ. ಈ ಯೋಜನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಅವರು ತಿಳಿಸಿದರು.

’ಈ ಎಲ್ಲಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯುವವರೆಗೂ ನಿರಂತರವಾಗಿ ಯೋಜನೆಯನ್ನು ನಿರ್ವಹಿಸಲಾಗುವುದು‘ ಎಂದು ಸೋಮನಾಥ್‌ ಹೇಳಿದರು.

ADVERTISEMENT

ರಾಕೆಟ್‌ ಜತೆ 36 ಉಪಗ್ರಹಗಳನ್ನು ಕಳುಹಿಸಲಾಗಿದೆ. 9 ಹಂತಗಳಲ್ಲಿರುವ 16 ಉಪಗ್ರಹಗಳು ಈಗಾಗಲೇ ಮಾಹಿತಿ ನೀಡಲು ಆರಂಭಿಸಿವೆ ಎಂದು ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.