ನವದೆಹಲಿ: 'ಸುಲ್ಲಿ ಡೀಲ್ಸ್‘ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿ ಓಂಕಾರೇಶ್ವರ್ ಠಾಕೂರ್, ತನ್ನ ಹೆಸರಿನಲ್ಲಿದ್ದ ಸಾಮಾಜಿಕ ತಾಣಗಳ ಖಾತೆಗಳನ್ನು ಡಿಲೀಟ್ ಮಾಡಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.
ವಿಚಾರಣೆ ನಡೆಸುವ ವೇಳೆ ಪೊಲೀಸರಿಗೆ ಹಲವು ಸಂಗತಿಗಳು ಆರೋಪಿ ಕುರಿತು ತಿಳಿದುಬಂದಿದೆ.
ಆತ ತಾಂತ್ರಿಕವಾಗಿ ಪರಿಣತಿ ಹೊಂದಿದ್ದು, ಸುಮಾರು 10 ಜಿಬಿಯಷ್ಟು ಡಾಟಾವನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ.
ಅವುಗಳನ್ನು ಮರಳಿ ಪಡೆದರೆ, ಸುಲ್ಲಿ ಡೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬಹುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಆರಂಭಿಕ ಹಂತದ ವಿಚಾರಣೆಯ ಸಂದರ್ಭದಲ್ಲಿ ಬಂಧಿತ ಆರೋಪಿ, ತಾನು ಟ್ವಿಟರ್‌ನ ಟ್ರಾಡ್ ಗುಂಪಿನ ಸದಸ್ಯ ಎನ್ನುವುದನ್ನು ಒಪ್ಪಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.