ADVERTISEMENT

ಮಹುವಾ ಮೊಯಿತ್ರಾ ಉಚ್ಚಾಟನೆ: ಜ.3ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಪಿಟಿಐ
Published 15 ಡಿಸೆಂಬರ್ 2023, 10:48 IST
Last Updated 15 ಡಿಸೆಂಬರ್ 2023, 10:48 IST
<div class="paragraphs"><p>ಮಹುವಾ ಮೊಯಿತ್ರಾ</p></div>

ಮಹುವಾ ಮೊಯಿತ್ರಾ

   

– ಪಿಟಿಐ

ನವದೆಹಲಿ: ಹಣಕ್ಕಾಗಿ ಪ್ರಶ್ನೆ ಕೇಳಿದ ಆರೋಪದಲ್ಲಿ ತಮ್ಮನ್ನು ಲೋಕಸಭೆಯಿಂದ ಉಚ್ಚಾಟನೆಗೊಳಿಸಿರುವ ನಿರ್ಣಯವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್, ಮುಂದಿನ ವರ್ಷ ಜನವರಿ 3ಕ್ಕೆ ಮುಂದೂಡಿದೆ.

ADVERTISEMENT

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೂಡಲೇ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್‌.ವಿ.ಎಸ್‌ ಭಟ್ಟಿ ಅವರಿದ್ದ ಪೀಠವು, ಪ್ರಕರಣದ ಕಡತಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿಲ್ಲ. ಹೀಗಾಗಿ ಜ.3ಕ್ಕೆ ನ್ಯಾಯಾಲಯದ ಚಳಿಗಾಲದ ರಜೆ ಅವಧಿ ಮುಗಿಯಲಿದ್ದು, ಆ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿತು.

ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ವಿಚಾರಣೆ ನಡೆಸಿದ್ದ ಲೋಕಸಭೆಯ ನೀತಿ ಸಮಿತಿಯು, ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ 495 ಪುಟಗಳ ವರದಿ ನೀಡಿತ್ತು.

ವರದಿಯನ್ನು ಸ್ವೀಕರಿಸಿದ್ದ ಲೋಕಸಭೆಯು, ಡಿ.8ರಂದು ಮಹುವಾ ಅವರನ್ನು ಉಚ್ಚಾಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.