ADVERTISEMENT

ಪಿಂಚಣಿ: ಎಂಟು ವಾರದೊಳಗೆ ‘ಸುಪ್ರೀಂ’ ಆದೇಶ ಜಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 22:04 IST
Last Updated 31 ಡಿಸೆಂಬರ್ 2022, 22:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಉದ್ಯೋಗಿಗಳ ಪಿಂಚಣಿ ನಿಧಿಗೆ (ಇಪಿಎಸ್‌) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ
ವನ್ನು ಎಂಟು ವಾರಗಳ ಒಳಗಾಗಿ ಜಾರಿಗೊಳಿಸುವಂತೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಉದ್ಯೋಗಿಗಳು ಪಿಂಚಣಿ ನಿಧಿಗೆ ತಮ್ಮ ಪೂರ್ಣ ವೇತನದ ಶೇ 8.33ರಷ್ಟನ್ನು ವಂತಿಗೆಯಾಗಿ ಪಾವತಿಸಬಹುದು ಎಂದು ಸುಪ್ರೀಂ ಕೋರ್ಟ್‌ ನವೆಂಬರ್‌ 4ರಂದು ಆದೇಶ ನೀಡಿದೆ. ಅದನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಇಪಿಎಫ್‌ಒ ಅಧಿಸೂಚನೆಯಲ್ಲಿ ತಿಳಿಸಿದೆ.

ಹೆಚ್ಚಿನ ಪಿಂಚಣಿ ಪಡೆಯಲು ಬೇಕಾದ ಅರ್ಹತೆ, ಯಾವೆಲ್ಲಾ ದಾಖಲೆಗಳು ಅಗತ್ಯ ಎನ್ನುವ ವಿವರಗಳನ್ನು ಮಾರ್ಗಸೂಚಿಯಲ್ಲಿ ನೀಡಲಾಗಿದೆ. ಅರ್ಹ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಬೇಕು.

ADVERTISEMENT

ಯಾರೆಲ್ಲಾ ಅರ್ಹರು: ಇಪಿಎಫ್‌ಒದ ಹಿಂದಿನ ವೇತನ ಮಿತಿ ₹5000/6500ಕ್ಕಿಂತಲೂ ಹೆಚ್ಚಿನ ಕೊಡುಗೆ ನೀಡಿರುವ ಇಪಿಎಸ್‌ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ.

ಇಪಿಎಸ್‌–95ಗೆ 2014ರಲ್ಲಿ ತಿದ್ದುಪಡಿ ತರುವುದಕ್ಕೂ ಮುನ್ನ ಉದ್ಯೋಗದಾತರೊಂದಿಗೆ ಜಂಟಿ ಆಯ್ಕೆ ಹೊಂದಿರುವವರು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

ಇಪಿಎಫ್‌ಒ ಸದಸ್ಯರು ನಿವೃತ್ತಿಗೂ ಮೊದಲು ಹೆಚ್ಚಿನ ಪಿಂಚಣಿಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಅವರ ಮನವಿಯನ್ನು ಇಪಿಎಫ್‌ಒ ನಿರಾಕರಿಸಿದ್ದರೆ ಅಂತಹ ಸದಸ್ಯರು ಸಹ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.