ADVERTISEMENT

ಪ್ರತಿ ವಾರವೂ ಉ.ಪ್ರಕ್ಕೆ ಬರಬೇಕಾಗಿಲ್ಲ: ಕಪ್ಪನ್‌ಗೆ ಸುಪ್ರೀಂ ಕೋರ್ಟ್ ರಿಲೀಫ್

ಪಿಟಿಐ
Published 4 ನವೆಂಬರ್ 2024, 13:29 IST
Last Updated 4 ನವೆಂಬರ್ 2024, 13:29 IST
ಸಿದ್ದೀಕ್‌ ಕಪ್ಪನ್
ಸಿದ್ದೀಕ್‌ ಕಪ್ಪನ್   

ನವದೆಹಲಿ: ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಪ್ರಕರಣ ಎದುರಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದೀಕ್‌ ಕಪ್ಪನ್‌ ಪ್ರತಿ ವಾರವೂ ಉತ್ತರ ಪ್ರದೇಶದ ಪೊಲೀಸ್‌ ಠಾಣೆಗೆ ಹಾಜರಾಗಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್‌ ಸೋಮವಾರ ರದ್ದು ಮಾಡಿದೆ.

2022ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕಪ್ಪನ್‌ ಅವರಿಗೆ ಜಾಮೀನು ನೀಡಿತ್ತು ಹಾಗೂ ಇದಕ್ಕೆ ಹಲವಾರು ಕಠಿಣ ಷರತ್ತುಗಳನ್ನೂ ವಿಧಿಸಿತ್ತು. ಕೇರಳದಿಂದ ಪ್ರತಿ ವಾರವೂ ಉತ್ತರ ಪ್ರದೇಶದ ಠಾಣೆಗೆ ಹಾಜರಾಗುವ ಷರತ್ತನ್ನು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠವು ರದ್ದು ಮಾಡಿದೆ. 

‘ಕಪ್ಪನ್‌ ಅವರು ಪ್ರತಿವಾರವೂ ಉತ್ತರ ಪ್ರದೇಶಕ್ಕೆ ಬರಬೇಕಾಗಿಲ್ಲ. ಅರ್ಜಿಯಲ್ಲಿ ಅವರು ಇರಿಸಿದ ಇನ್ನುಳಿದ ಬೇಡಿಕೆಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.