ADVERTISEMENT

ಪ್ರವಾಹಪೀಡಿತ ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಬೆನ್ನಿನ ಮೇಲೆ ಉಪಮೇಯರ್ ಸವಾರಿ

ಪಿಟಿಐ
Published 29 ಜುಲೈ 2024, 2:34 IST
Last Updated 29 ಜುಲೈ 2024, 2:34 IST
<div class="paragraphs"><p>ಸೂರತ್‌ನ ಉಪಮೇಯರ್ ನರೇಂದ್ರ ಪಾಟೀಲ್ ಅವರು ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಬೆನ್ನಿನ ಮೇಲೆ ಕುಳಿತಿರುವ ದೃಶ್ಯ</p></div>

ಸೂರತ್‌ನ ಉಪಮೇಯರ್ ನರೇಂದ್ರ ಪಾಟೀಲ್ ಅವರು ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಬೆನ್ನಿನ ಮೇಲೆ ಕುಳಿತಿರುವ ದೃಶ್ಯ

   

ಚಿತ್ರಕೃಪೆ: ದಿಲೀಪ್ ಸಿಂಗ್ ಎಕ್ಸ್‌ (ಟ್ವಿಟರ್‌) ಖಾತೆ

ಸೂರತ್: ನಗರದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸೂರತ್‌ನ ಉಪಮೇಯರ್ ನರೇಂದ್ರ ಪಾಟೀಲ್ ಅವರು ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಬೆನ್ನಿನ ಮೇಲೆ ಕುಳಿತು (ಪಿಗ್ಗಿಬ್ಯಾಕ್) ಸವಾರಿ ಮಾಡಿದ್ದಾರೆ. ಇದೀಗ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ಬಿಜೆಪಿ ನಾಯಕರೂ ಆಗಿರುವ ನರೇಂದ್ರ ಪಾಟೀಲ್ ಅವರು ಕಾಲು ನೋವು ಇದೆ ಎಂದು ಸಬೂಬು ಹೇಳಿ ಕೆಸರುಮಯವಾಗಿದ್ದ ಪ್ರದೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಬೆನ್ನೇರಿರುವ ಘಟನೆ ಭಾನುವಾರ ನಡೆದಿದೆ. ಪಾಟೀಲರನ್ನು ಅಗ್ನಿಶಾಮಕ ಸಿಬ್ಬಂದಿ ಬೆನ್ನ ಮೇಲೆ ಹೊತ್ತುಕೊಂಡು ತುಂಬಾ ದೂರ ಸಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರೇಂದ್ರ ಪಾಟೀಲ್ ಈಚೆಗೆ ಸೂರತ್‌ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಹೆಚ್ಚು ಸಮಯ ನಿಂತಿದ್ದರಿಂದ ಅವರಿಗೆ ಕಾಲು ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅವರಿನ್ನು ಹೊತ್ತುಕೊಂಡು ಹೋಗುವ ಮೂಲಕ ಸಹಾಯ ಮಾಡಲಾಯಿತು ಎಂದು ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ ತಿಳಿಸಿದ್ದಾರೆ.

‘ಕಟ್ಟಡದ ನೆಲಮಾಳಿಗೆಯಲ್ಲಿ ನಾಲ್ಕು ದಿನಗಳ ಹಿಂದೆ ಒಬ್ಬ ವ್ಯಕ್ತಿ ಮುಳುಗಿ ಮೃತಪಟ್ಟಿದ್ದರು. ಆದರೆ, ಮೃತದೇಹವು ನೆಲಮಾಳಿಗೆಯ 35 ಅಡಿ ಆಳದ ನೀರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ನಾಲ್ಕು ದಿನ ಶ್ರಮಿಸಿದರೂ ಮೃತದೇಹ ಪತ್ತೆಯಾಗಿಲ್ಲ. ಮುಳುಗು ತಜ್ಞರ ನೆರವಿನಿಂದ ಕಾರ್ಯಾಚರಣೆ ನಡೆಸಲಾಯಿತು. ಬಳಿಕ ಕಬ್ಬಿಣದ ರಾಡ್‌ನಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲಾಯಿತು’ ಎಂದು ಚೌಧರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.