ಹಿರೋಶಿಮಾ: ವಿಶ್ವದ ಮೊದಲ ಪರಮಾಣು ಶಸ್ತ್ರಾಸ್ತ್ರ ಯುದ್ಧದಲ್ಲಿ ಬದುಕುಳಿದವರ ಮನವಿ ಆಲಿಸುವುದು ಮತ್ತು ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕುವಂತೆ ಜಪಾನ್ ಸರ್ಕಾರವನ್ನು ಇಲ್ಲಿನ ಮೇಯರ್ಕಝಮಿ ಮಾಟ್ಸುಯಿ ಒತ್ತಾಯಿಸಿದ್ದಾರೆ.
ಹಿರೋಶಿಮಾ ಮೇಲೆ ನಡೆದ ವಿಶ್ವದ ಮೊದಲ ಅಣುಬಾಂಬ್ ದಾಳಿಗೆ75 ವರ್ಷ.ಈ ಹಿನ್ನೆಲೆಯಲ್ಲಿ ತಮ್ಮ ಶಾಂತಿ ಸಂದೇಶದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ.
ಜಪಾನ್ ಸರ್ಕಾರವು ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದನ್ನು ಕಪಟ ಎಂದು ಹೇಳಿರುವ ಅವರು, ವಿಶ್ವದ ಎಲ್ಲ ನಾಯಕರು ಈ ಪರಮಾಣು ನಿಶಸ್ತ್ರೀಕರಣಕ್ಕೆ ಬದ್ಧರಾಗಿರಬೇಕು ಎಂದು ಒತ್ತಾಯಿಸಿದ್ದಾರೆ.
ಪರಮಾಣು ಶಸ್ತ್ರಾಸ್ತ್ರ ದಾಳಿಯಿಂದ ಬಳಲುತ್ತಿರುವ ಏಕೈಕ ರಾಷ್ಟ್ರವಾಗಿರುವ ಜಪಾನ್‌ನ ಹಿರೋಶಿಮಾದ ಬೆಂಬಲಕ್ಕೆ ವಿಶ್ವದ ಎಲ್ಲ ನಾಗರಿಕರು ನಿಲ್ಲಬೇಕು. ಹಾಗೆ ಬೇರೆ ದೇಶದವರ ಮನವೊಲಿಸುವ ಪ್ರಯತ್ನವಾಗಬೇಕು’ ಎಂದುಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.