ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹೊರಡಿಸಿರುವ ಲುಕ್‌ಔಟ್ ನೋಟಿಸ್ ಪ್ರಶ್ನಿಸಿ ನಟಿ ರಿಯಾ ಚಕ್ರವರ್ತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2020ರ ಜೂನ್ 14ರಂದು ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ರಜಪೂತ್ ಮೃತದೇಹ ಪತ್ತೆಯಾಗಿತ್ತು. ರಜಪೂತ್ ಗೆಳತಿ ರಿಯಾ ಮತ್ತು ಆಕೆಯ ಸೋದರ ಸೇರಿಕೊಂಡು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಸುಶಾಂತ್ ತಂದೆ ಬಿಹಾರ ಪೊಲೀಸರಿಗೆ ದೂರು ನೀಡಿದ್ದರು.
ಇದೇ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ರಿಯಾ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ತಾನು ವಿದೇಶಕ್ಕೆ ತೆರಳಬೇಕಿರುವುದರಿಂದ ಇದನ್ನು ತಾತ್ಕಾಲಿಕವಾಗಿ ಹಾಗೂ ಪೂರ್ಣವಾಗಿ ರದ್ದುಪಡಿಸುವಂತೆ ಎರಡು ಪ್ರತ್ಯೇಕ ಅರ್ಜಿಗಳನ್ನು ರಿಯಾ ಸಲ್ಲಿಸಿದ್ದಾರೆ.
‘ಪ್ರಕರಣ ಕುರಿತು ಸಿಬಿಐ ಎಫ್‌ಐಆರ್ ದಾಖಲಿಸಿ ಮೂರು ವರ್ಷಗಳಾಗಿವೆ. ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ರಿಯಾ ಅವರಿಗೆ ಸಿಬಿಐ ಯಾವುದೇ ಸಮನ್ಸ್ ಜಾರಿ ಮಾಡಿಲ್ಲ. ಚಾರ್ಜ್‌ಶೀಟ್ ಕೂಡಾ ಸಲ್ಲಿಸಿಲ್ಲ’ ಎಂದು ರಿಯಾ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.
ರಿಯಾ ಚಕ್ರವರ್ತಿ ಅವರು ಈ ಹಿಂದೆ ವಿದೇಶಕ್ಕೆ ಪ್ರಯಾಣಿಸಿದ್ದರೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಡಿ. 20ಕ್ಕೆ ಪ್ರಕರಣವನ್ನು ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.