ಚೆನ್ನೈ: ದನದ ಮಾಂಸದ ಸೂಪ್ ಸೇವಿಸುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದ24 ವರ್ಷದ ಯುವಕನನ್ನು ‘ಶಾಂತಿ ಮತ್ತು ಕೋಮುಸೌಹಾರ್ದಕ್ಕೆ ಧಕ್ಕೆ ತಂದ ಆರೋಪ’ದ ಮೇಲೆ ಇಲ್ಲಿನ ನಾಗಪಟ್ಟಿಣಂ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಪೊರವಚೆರಿ ಗ್ರಾಮದ ನಿವಾಸಿ ಮೊಹಮ್ಮದ್ ಫೈಜಾನ್ ಬಂಧಿತ. ಜುಲೈ 11ರಂದು ಚಿತ್ರ ಪ್ರಕಟಿಸಿದ್ದ. ಇದರಿಂದ ಆಕ್ರೋಶ ಗೊಂಡಿದ್ದ ನಾಲ್ವರು ಯುವಕರು ಈತನ ಮೇಲೆ ಹಲ್ಲೆ ಮಾಡಿತ್ತು. ಗಾಯಗೊಂಡಿದ್ದ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.