ನವದೆಹಲಿ (ಪಿಟಿಐ): ಇತ್ತೀಚೆಗೆ ದೇಶವೊಂದರಲ್ಲಿ ಪ್ರಯಾಣ ಮಾಡಿ ಬಂದಿರುವ ವ್ಯಕ್ತಿಯೊಬ್ಬರಿಗೆ ಮಂಕಿ ಪಾಕ್ಸ್ ಸೋಂಕು ತಗುಲಿರುವ ಶಂಕಿತ ಪ್ರಕರಣ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ರೋಗಿಯನ್ನು ಮಂಕಿ ಪಾಕ್ಸ್ ಕಾಯಿಲೆ ಚಿಕಿತ್ಸೆಗೆ ಮೀಸಲಾಗಿಟ್ಟಿರುವ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ರೋಗಿಯ ಸ್ಥಿತಿ ಸ್ಥಿರವಾಗಿದೆ. ಆತಂಕಪಡುವ ಸ್ಥಿತಿ ಇಲ್ಲ. ರೋಗಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರೋಗವನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.
‘ಈ ಪ್ರಕರಣವನ್ನು ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತಿದೆ. ಸಂಭಾವ್ಯ ಮೂಲಗಳನ್ನು ಗುರುತಿಸಲು ಮತ್ತು ದೇಶದೊಳಗಿನ ಪರಿಣಾಮವನ್ನು ನಿರ್ಣಯಿಸಲು ಸಂಪರ್ಕ ಪತ್ತೆಹಚ್ಚುವಿಕೆ ನಡೆಯುತ್ತಿದೆ’ ಎಂದು ಸಚಿವಾಲಯ ಹೇಳಿದೆ.
ಇಂತಹ ಪ್ರತ್ಯೇಕವಾದ ಪ್ರಯಾಣ ಸಂಬಂಧಿತ ಪ್ರಕರಣಗಳನ್ನು ಎದುರಿಸಲು ದೇಶವು ಸಂಪೂರ್ಣ ಸಿದ್ಧವಾಗಿದೆ. ಯಾವುದೇ ಸಂಭಾವ್ಯ ಅಪಾಯವನ್ನು ನಿರ್ವಹಿಸಲು ಮತ್ತು ತಗ್ಗಿಸಲು ದೃಢವಾದ ಕ್ರಮಗಳನ್ನು ಹೊಂದಿದೆ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.