ADVERTISEMENT

ಗಡಿಯಲ್ಲಿ ಮತ್ತೆ ಪಾಕಿಸ್ತಾನದ ಡ್ರೋನ್ ಹಾರಾಟ: ಗುಂಡು ಹಾರಿಸಿದ ಬಿಎಸ್‌ಎಫ್‌

ಪಿಟಿಐ
Published 9 ಜೂನ್ 2022, 5:23 IST
Last Updated 9 ಜೂನ್ 2022, 5:23 IST
   

ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿರೇಖೆಯ ಜಮ್ಮುವಿನಲ್ಲಿ ಗುರುವಾರ ಮುಂಜಾನೆ ಪಾಕಿಸ್ತಾನದ ಶಂಕಿತ ಡ್ರೋನ್ ಒಂದು ಪತ್ತೆಯಾಗಿದೆ.

ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಡ್ರೋನ್‌ನತ್ತ ಗುಂಡು ಹಾರಿಸಿದ್ದು, ನಂತರ ಡ್ರೋನ್ ಮರಳಿ ಹೋಗಿದೆ.

ಆದರೆ ಡ್ರೋನ್ ಮೂಲಕ ಮದ್ದುಗುಂಡು ಇಲ್ಲವೇ ಶಸ್ತ್ರಾಸ್ತ್ರ ಕಳುಹಿಸಿರುವ ಸಾಧ್ಯತೆಯಿದ್ದು, ಅದಕ್ಕಾಗಿ ಭದ್ರತಾ ಪಡೆಗಳು ಹುಡುಕಾಟ ನಡೆಸಿವೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಡ್ರೋನ್ ಮೂಲಕ ಪಾಕಿಸ್ತಾನದಿಂದ ಭಾರತದ ಗಡಿಯೊಳಕ್ಕೆ ಮಾದಕ ವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಸರಬರಾಜು ಆಗುತ್ತಿದೆ.

ಭದ್ರತಾ ಪಡೆಗಳು ಜಮ್ಮು, ಕಥುವಾ ಮತ್ತು ಸಾಂಬ ಪ್ರಾಂತ್ಯಗಳಲ್ಲಿ ಡ್ರೋನ್ ಮೂಲಕ ಕಳುಹಿಸಲಾಗಿದ್ದ ಮದ್ದುಗುಂಡು, ಸುಧಾರಿತ ಸ್ಫೋಟಕ ಮತ್ತು ರೈಫಲ್‌ಗಳನ್ನು ವಶಪಡಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.