ADVERTISEMENT

‘ಸಚಿವರು, ಶಾಸಕರ ಆಸ್ತಿ–ಪಾಸ್ತಿ ಲೂಟಿ ಮಾಡಿದ ಶಂಕಿತರ ಪತ್ತೆ’

ಪಿಟಿಐ
Published 22 ನವೆಂಬರ್ 2024, 16:34 IST
Last Updated 22 ನವೆಂಬರ್ 2024, 16:34 IST
ಬಿರೇನ್‌ಸಿಂಗ್‌–ಪಿಟಿಐ ಚಿತ್ರ
ಬಿರೇನ್‌ಸಿಂಗ್‌–ಪಿಟಿಐ ಚಿತ್ರ   

ಇಂಫಾಲ: ‘ನ.16ರಂದು ನಡೆದ ಪ್ರತಿಭಟನೆ ವೇಳೆ ಶಾಸಕರು, ಸಚಿವರ ಮನೆ ಲೂಟಿ ಮಾಡಿದ ಶಂಕಿತರನ್ನು ಪತ್ತೆ ಮಾಡಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ತಿಳಿಸಿದರು.

ಸಚಿವರೊಬ್ಬರ ಮನೆಗೆ ನುಗ್ಗಿ ಅವರ ತಂದೆಯ ಭಾವಚಿತ್ರವನ್ನು ಸುಟ್ಟುಹಾಕಿ, ದರೋಡೆ ಮಾಡಿದ್ದನ್ನು ಖಂಡಿಸಿದ ಅವರು, ಈ ರೀತಿ ನಡೆಗಳು ಯಾವುದೇ ಪ್ರತಿಭಟನೆಗಳಲ್ಲಿ ನಡೆಯಲು ಸಾಧ್ಯವೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವು ಗುಂ‍ಪುಗಳು ಸಚಿವರು, ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಲೂಟಿ ಮಾಡಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳು ನಿಜಕ್ಕೂ ನಾಚಿಕೆಯಾಗುತ್ತಿದೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.

ADVERTISEMENT

‘ಜಿರೀಬಾಮ್‌ನಲ್ಲಿ ಮಹಿಳೆಯರು ಹಾಗೂ ಮಕ್ಕಳನ್ನು ಕೊಂದ ಘಟನೆ ಖಂಡಿಸಿ ನೈಜ ಪ್ರತಿಭಟನೆ ನಡೆಸುವವರಿಗೆ ಯಾವುದೇ ವಿರೋಧವಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ಕೆಲವು ರಾಜಕೀಯ ಪ್ರೇರಿತವಾಗಿ ನಡೆಸುವ ಪ್ರತಿಭಟನಕಾರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪರಿಸ್ಥಿತಿ ಸುಧಾರಿಸಿದ ಬಳಿಕ ಮೊಬೈಲ್‌ ಇಂಟರ್‌ನೆಟ್‌ ಮೇಲೆ ಹೇರಿದ ನಿಷೇಧ ಹಿಂದಕ್ಕೆ ಪಡೆಯಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.