ನವದೆಹಲಿ:ಹುಟ್ಟುಹಬ್ಬದ ಪಾರ್ಟಿಯಲ್ಲಿ ಹುಕ್ಕಾ ಸೇದಿಶಾಲೆಯಿಂದಅಮಾನತುಗೊಂಡಿದ್ದ 9ನೇ ತರಗತಿವಿದ್ಯಾರ್ಥಿಗೆ ಮತ್ತೆ ಶಾಲೆಗೆ ಹಾಜರಾಗುವಂತೆ ದೆಹಲಿಹೈಕೊರ್ಟ್ಮಧ್ಯಂತರ ಆದೇಶ ನೀಡಿದೆ.
ನ್ಯಾಯಾಧೀಶ ರಾಜೀವ್ಶಾಕ್ದಾರ್ಅವರು ಈ ಸಂಬಂಧ ದೆಹಲಿಸರ್ಕಾರಮತ್ತು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.
ಡಿಬಾರ್ ಮಾಡಿರುವಪ್ರಾಂಶುಪಾಲರನಿರ್ಧಾರವನ್ನುಪ್ರಶ್ನಿಸಿವಿದ್ಯಾರ್ಥಿಯ ಪೋಷಕರು ಕೊರ್ಟ್‌ಗೆ ಹೋಗಿದ್ದರು. ಶಾಲೆಯ ನಿರ್ಧಾರ ಕಾನೂನು ಬಾಹಿರವಾಗಿದ್ದು, ಶಿಕ್ಷಣ ಹಕ್ಕುಗಳನ್ನು ಮೊಟಕುಗೊಳಿಸಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಘಟನೆಯ ವಿವರ
2019ರ ಆಗಸ್ಟ್‌ನಲ್ಲಿ ಡಿಬಾರ್ ಆಗಿದ್ದ ವಿದ್ಯಾರ್ಥಿ ಗೆಳೆಯರೊಂದಿಗೆಸ್ಥಳೀಯ ಪಬ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಹೋಗಿದ್ದರು.ಗೆಳೆಯರೊಂದಿಗೆಸೇರಿ ಹುಕ್ಕಾಸೇದಿದ್ದರು. ಇದನ್ನು ಗೆಳೆಯನೊಬ್ಬ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದನು. ಈ ಘಟನೆಯು ಅಕ್ಟೋಬರ್‌ನಲ್ಲಿ ಪ್ರಾಂಶುಪಾಲರ ಗಮನಕ್ಕೆ ಬಂದಿತ್ತು. ಬಳಿಕ ವಿದ್ಯಾರ್ಥಿಯನ್ನು ಡಿಬಾರ್ ಮಾಡಿದ್ದರು.
ಆರ್ಥಿಕವಾಗಿ ಹಿಂದುಳಿದವರ ಕೋಟಾದಿಂದ ಈ ವಿದ್ಯಾರ್ಥಿ ಶಾಲೆಗೆ ಪ್ರವೇಶಪಡೆದಿದ್ದು ಹುಕ್ಕಾ ಸೇದಿದ್ದು ತಪ್ಪು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿತ್ತು. ಅಲ್ಲದೇ ಅಕ್ಟೋಬರ್ ತಿಂಗಳಲ್ಲಿ ನಡೆದ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ ನಿರಾಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.