ADVERTISEMENT

ನಿತ್ಯಾನಂದ ಶಿಷ್ಯೆಯರ ಪತ್ತೆ: ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:46 IST
Last Updated 26 ನವೆಂಬರ್ 2019, 19:46 IST

ಅಹಮದಾಬಾದ್: ನಿತ್ಯಾನಂದ ಸ್ವಾಮೀಜಿ ಭಕ್ತರಾದ, ಸದ್ಯ ವಿದೇಶದಲ್ಲಿ ಇದ್ದಾರೆ ಎನ್ನಲಾದ ಇಬ್ಬರು ಯುವತಿಯರನ್ನು ಪತ್ತೆಮಾಡಿ ಕರೆತರಲು ಕೇಂದ್ರದ ನೆರವು ಪಡೆಯಬೇಕು ಎಂದು ಗುಜರಾತ್ ಹೈಕೋರ್ಟ್‌ ಮಂಗಳವಾರ ಪೊಲೀಸ್‌ ಇಲಾಖೆಗೆ ಸೂಚಿಸಿತು.

ಯುವತಿಯರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂಬ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಕುರಿತು ಹೈಕೋರ್ಟ್‌ ಕಾಳಜಿ ವ್ಯಕ್ತ
ಪಡಿಸಿತು. ಯುವತಿಯರನ್ನು ನಿತ್ಯಾನಂದ ಸ್ವಾಮೀಜಿ ಅಪಹರಿಸಿದ್ದಾರೆ ಎಂದು ಆರೋಪಿಸಿರುವ ಅವರ ತಂದೆ, ಮಕ್ಕಳ ಹಾಜರಿ ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಇಬ್ಬರು ಉಗ್ರರ ಹತ್ಯೆ

ADVERTISEMENT

ಶ್ರೀನಗರ: ಪುಲ್ವಾಮಾ ಜಿಲ್ಲೆಯ ದ್ರಬ್ಗಾಮ್‌ ಗ್ರಾಮದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆ ಇಬ್ಬರು ಉಗ್ರರು ಹತರಾಗಿದ್ದಾರೆ.

ಗ್ರೆನೇಡ್‌ ದಾಳಿ: ಇಬ್ಬರ ಸಾವು

ಶ್ರೀನಗರ (ಪಿಟಿಐ/ರಾಯಿಟರ್ಸ್‌): ಜಮ್ಮು ಮತ್ತು ಕಾಶ್ಮೀರದಅನಂತನಾಗ್‌ ಹಾಗೂ ಶ್ರೀನಗರ ಜಿಲ್ಲೆಗಳಲ್ಲಿ ಮಂಗಳವಾರ ಎರಡು ಪ್ರತ್ಯೇಕ ಸ್ಫೋಟಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಅನಂತನಾಗ್‌ನ ವಾಗೂರಾ ಪ್ರದೇಶದಲ್ಲಿ ನಡೆಯುತ್ತಿದ್ದ ಸರ್ಕಾರಿ ಕಾರ್ಯಕ್ರಮ ಮೇಲೆ ಉಗ್ರರು ಗ್ರೆನೇಡ್‌ ದಾಳಿ ನಡೆಸಿದಾಗ ಸರ್ಕಾರಿ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮೃತಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.