ADVERTISEMENT

ವಿವೇಕಾನಂದರು ಈಗ ಇದ್ದಿದ್ದರೆ ಅವರ ಮೇಲೂ ಮಸಿ ಎರಚಲಾಗುತ್ತಿತ್ತು: ಶಶಿ ತರೂರ್ 

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 6:11 IST
Last Updated 6 ಆಗಸ್ಟ್ 2018, 6:11 IST
   

ತಿರುವನಂತಪುರ: ಜಗತ್ತಿಗೆ ಮಾನವೀಯತೆಯ ಮಂತ್ರ ಸಾರಿದ ಅಧ್ಯಾತ್ಮಿಕಗುರು ಸ್ವಾಮಿ ವಿವೇಕಾನಂದ ಅವರು ಈಗ ಇದ್ದಿದ್ದರೆಹಲವು ಹಿಂಸಾತ್ಮಕ ದಾಳಿಗೆ ಗುರಿಯಾಗಬೇಕಾಗುತಿತ್ತು ಎಂದು ಕಾಂಗ್ರೆಸ್ ಶಾಸಕ ಶಶಿ ತರೂರ್ ಹೇಳಿದ್ದಾರೆ.

ಕಳೆದ ತಿಂಗಳು ಜಾರ್ಖಂಡ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ದಾಳಿ ಖಂಡಿಸಿ ಮಾತನಾಡಿದ ತರೂರ್, ಸ್ವಾಮಿ ವಿವೇಕಾನಂದ ಅವರು ಮಾನವೀಯತೆಯನ್ನು ಉಸಿರಾಗಿಸಿಕೊಂಡವರು. ಜನರನ್ನು ಗೌರವಿಸುವಂತೆ ಜಗತ್ತಿಗೆ ಸಾರಿದವರು. ಅಕಸ್ಮಾತ್ ಅವರು ಈಗ ಬದುಕಿದ್ದಿದ್ದರೆ ಅಗ್ನಿವೇಶ್ ಮೇಲೆದಾಳಿ ನಡೆದಂತೆ ಅವರ ಮೇಲೂ ಹಲ್ಲೆಗಳು ನಡೆಯುತ್ತಿತ್ತು ಹಾಗೂ ಮುಖಕ್ಕೆ ಮಸಿ ಎರಚಲಾಗುತ್ತಿತ್ತು ಎಂದು ಕಿಡಿಕಾರಿದರು.

2019ರ ಸಾರ್ವಜನಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಭಾರತ 'ಹಿಂದೂ ಪಾಕಿಸ್ತಾನ'ವಾಗಲಿದೆ ಎಂದು ಶಶಿ ತರೂರ್ ಇತ್ತೀಚೆಗೆಬಿಜೆಪಿಯನ್ನು ಟೀಕಿಸಿದ್ದರು.

ಜುಲೈ 17ರಂದು ಸಾಮಾಜಿಕ ಕಾರ್ಯಕರ್ತಸ್ವಾಮಿ ಅಗ್ನಿವೇಶ್ ಅವರ ಮೇಲೆ ಜಾರ್ಖಂಡ್‌ನ ಪಕುರ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿ ಬಟ್ಟೆ ಹರಿದು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.