ನವದೆಹಲಿ: ಅಂಗವಿಕಲರಿಗೆ ನೀಡಲಾಗುವ UDID ಪ್ರಮಾಣಪತ್ರ ಪಡೆಯುವುದನ್ನು ಸರಳೀಕರಿಸುವ ಉದ್ದೇಶದಿಂದ ಸ್ವಾವಲಂಬನ್ ಪೋರ್ಟಲ್ ಪರಿಷ್ಕರಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಬಿ.ಎಲ್. ವರ್ಮಾ ಅವರು ಮಂಗಳವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಪೋರ್ಟಲ್‌ನಲ್ಲಿ ಕೆಲವೊಂದು ದೋಷಗಳಿರುವ ಕುರಿತು ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಅವುಗಳನ್ನು ಸರಿಪಡಿಸಲಾಗಿದೆ. ಇದರೊಂದಿಗೆ ಪೋರ್ಟಲ್‌ನಲ್ಲಿದ್ದ ಇನ್ನೂ ಹಲವು ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲಾಗಿದೆ’ ಎಂದಿದ್ದಾರೆ.
‘ಪೋರ್ಟಲ್‌ನಲ್ಲಿ ಮುಖ್ಯ ವೈದ್ಯಾಧಿಕಾರಿಯನ್ನು ಸೇರಿಸಲು ಅನುಕೂಲವಾಗುವಂತೆ ಬದಲಿಸಲಾಗಿದೆ. ಹೀಗೆ ಸೇರಿಸುವ ಅಧಿಕಾರವನ್ನು ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಅಂಗವಿಕಲರಿಂದ ಹಾಗೂ ಅಧಿಕಾರಿಗಳಿಂದ ಬಂದ ಸಲಹೆಗಳನ್ನು ಆಧರಿಸಿ ಅಂತರ್ಜಾಲತಾಣದಲ್ಲಿ ಅಪ್‌ಡೇಟ್ಸ್‌ಗಳನ್ನು ಮಾಡಲಾಗಿದೆ’ ಎಂದು ವರ್ಮಾ ತಿಳಿಸಿದ್ದಾರೆ.
ಅಂತರ್ಜಾಲ ತಾಣದ ವಿಳಾಸ: www.swavlambancard.gov.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.