ಸ್ಟಾಕ್‌ಹೋಂ: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ನಿರ್ವಹಿಸುವ ದ ನೊಬೆಲ್ ಫೌಂಡೇಷನ್, ತನ್ನ ಆಹ್ವಾನ ನಿಯಮವನ್ನು ರದ್ದುಗೊಳಿಸಿದೆ.
ರಷ್ಯಾ, ಬೆಲಾರಸ್ ಮತ್ತು ಇರಾನ್ ಹಾಗೂ ಈ ಹಿಂದೆ ನಿಷೇಧಿಸಲಾಗಿದ್ದ ಬಲಪಂಥೀಯ ಸ್ವೀಡಿಷ್ ಪಕ್ಷದ ನಾಯಕರನ್ನೂ ಆಹ್ವಾನಿಸಿದೆ.
‘ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವವರ ಧ್ವನಿಯನ್ನು ತಗ್ಗಿಸಲಾಗುತ್ತಿದೆ ಎಂಬ ಜಾಗತಿಕ ಪ್ರವೃತ್ತಿಯಿದೆ. ಅದನ್ನು ಎದುರಿಸಲು ನಾವೀಗ ನೊಬೆಲ್ ಪ್ರಶಸ್ತಿಯ ಆಹ್ವಾನದ ಸ್ವರೂಪವನ್ನು ವಿಸ್ತರಿಸುತ್ತಿದ್ದೇವೆ’ ಎಂದು ದ ನೊಬೆಲ್ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದರ್ ಹೆಲ್ಗೆಸೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ, ಉಕ್ರೇನ್ ಯುದ್ಧದ ಕಾರಣದಿಂದ ರಷ್ಯಾ, ಬೆಲಾರಸ್ ಮತ್ತು ಇರಾನ್‌ನ ರಾಜತಾಂತ್ರಿಕ ರಾಯಭಾರಿಗಳಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ, ಔತಣಕೂಟಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.