ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹13,500 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯ ನಾಲ್ಕು ಸ್ವಿಸ್ ಖಾತೆಗಳನ್ನು ಸ್ವಿಜರ್‌ಲ್ಯಾಂಡ್ ಅಧಿಕಾರಿಗಳು ಗುರುವಾರ ಸ್ಥಗಿತಗೊಳಿಸಿದ್ದಾರೆ.
ಹಣ ವಂಚನೆ ಪ್ರಕರಣ ತನಿಖೆ ಸಂಬಂಧನೀರವ್ ಮೋದಿ ಮತ್ತು ಆತನ ಸಹೋದರಿ ಪೂರ್ವಿ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮೋದಿ ವಿರುದ್ಧ ಭಾರತದಲ್ಲಿ ಅಪರಾಧ ಪ್ರಕರಣದ ದಾಖಲಾದ ಕೆಲವೇ ತಿಂಗಳಲ್ಲಿ ಅವರು ಸಿಂಗಾಪುರ್‌ನಿಂದ ಸ್ವಿಜರ್‌ಲೆಂಡ್‌ಗೆ ₹89 ಕೋಟಿ ವರ್ಗಾವಣೆ ಮಾಡಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.
ಪಿಟಿಐ ಸುದ್ದಿಮೂಲದ ಪ್ರಕಾರ ಮುಟ್ಟುಗೋಲು ಹಾಕಲಾದ ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹283.16 ಕೋಟಿ ಇತ್ತು.ಜಾರಿ ನಿರ್ದೇಶನಾಲಯದ ಮನವಿಮೇರೆಗೆ ಈ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ (ಪಿಎಂಎಲ್‌ಎ) ಈ ಖಾತೆಗಳನ್ನು ತರಬೇಕೆಂದು ಜಾರಿ ನಿರ್ದೇಶನಾಲಯ ಸ್ವಿಸ್ ಅಧಿಕಾರಿಗಳನ್ನು ಸಮೀಪಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.