ADVERTISEMENT

ಕೊರೊನಾ ಭೀತಿ: ತಾಜ್‌‌ಮಹಲ್ ಸಾರ್ವಜನಿಕರಿಗೆ ಪ್ರವೇಶವಿಲ್ಲ

ಏಜೆನ್ಸೀಸ್
Published 6 ಜುಲೈ 2020, 6:40 IST
Last Updated 6 ಜುಲೈ 2020, 6:40 IST
ತಾಜ್‌‌ಮಹಲ್‌‌ಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
ತಾಜ್‌‌ಮಹಲ್‌‌ಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ   

ಆಗ್ರಾ (ಉತ್ತರಪ್ರದೇಶ): ವಿಶ್ವ ಪ್ರಸಿದ್ಧ ತಾಜ್‌‌ಮಹಲ್ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶ ನೀಡುವ ತನ್ನ ನಿರ್ಧಾರದಿಂದ ಉತ್ತರಪ್ರದೇಶ ಸರ್ಕಾರ ಹಿಂದೆ ಸರಿದಿದೆ.

ಭಾನುವಾರ ತಡರಾತ್ರಿ ಈ ಸಂಬಂಧ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಆಗ್ರಾದಲ್ಲಿ ಐತಿಹಾಸಿಕ ಸ್ಮಾರಕಗಳನ್ನು ತೆರೆಯುವುದು ಸೂಕ್ತ ಅಲ್ಲ ಎಂದು ತಿಳಿಸಿದೆ. ಉತ್ತರಪ್ರದೇಶದ ಆಗ್ರಾದಲ್ಲಿ ಕೊರೊನಾ ಸೋಂಕು ಉಲ್ಭಣಗೊಂಡಿದೆ.

ಕೇಂದ್ರ ಸರ್ಕಾರವು ದೇಶದಾದ್ಯಂತ ಇತರ ಸ್ಮಾರಕಗಳನ್ನು ಪುನಃ ತೆರೆಯುವ ಬಗ್ಗೆ ಯಾವುದೇ ಸ್ಪಷ್ಟ ಆದೇಶ ಹೊರಡಿಸಿಲ್ಲ. ಆದ ಕಾರಣ ಆಗ್ರಾದ ಯಾವುದೇ ಸ್ಮಾರಕಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದೆ.

ADVERTISEMENT

ಭಾರತದಲ್ಲಿ ಕೊರೊನಾ ಸೋಂಕು ಕಳೆದ ಮೂರು ತಿಂಗಳಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ.
ಭಾನುವಾರ ಒಂದೇ ದಿನ 24,850 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 600 ಮಂದಿ ಮೃತಪಟ್ಟಿದ್ದಾರೆ. ಒಟ್ಟು 673,165 ಪ್ರಕರಣಗಳು ವರದಿಯಾಗಿವೆ.

ಈ ನಡುವೆ ಕೇಂದ್ರ ಸರ್ಕಾರ ಮಾತ್ರ ಲಾಕ್‌‌ಡೌನ್ ಅನ್ನು ಸಡಿಲಗೊಳಿಸುತ್ತಿದೆ. ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಆದರೆ, ಆಂತರಿಕ ವಿಮಾನ ಸಂಚಾರವನ್ನು ಮುಂದುವರಿದೆದೆ. ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಯಾವುದೇ ಸಂಪರ್ಕ ಸಾಧ್ಯವಾಗದಂತೆ ತಡೆಯೊಡ್ಡುತ್ತಿರುವ ಸ್ಥಳೀಯ ಆಡಳಿತ ಕೊರೊನಾ ಸೋಂಕು ಹರಡದಂತೆ ಎಚ್ಚರ ವಹಿಸುತ್ತಿವೆ.
ಅಲ್ಲದೆ, ಆಗ್ರಾದಲ್ಲಿ ಯಾವುದೇ ಸಂದರ್ಶಕರನ್ನು ನಿರೀಕ್ಷಿಸುವುದಿಲ್ಲ, ಏಕೆಂದರೆ, ತಾಜ್ ಮಹಲ್ ಸುತ್ತಮುತ್ತ ಹೋಟೆಲ್ ಹಾಗೂ ಅಂಗಡಿಗಳು ಬಂದ್ ಆಗಿವೆ ಎಂದು ಸ್ಥಳೀಯ ಆಡಳಿತಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.