ನವದೆಹಲಿ: ತಾಲಿಬಾನ್ ಸರ್ಕಾರವು ಮುಂಬೈನಲ್ಲಿರುವ ಅಫ್ಗಾನಿಸ್ತಾನದ ಕಾನ್ಸುಲೇಟ್ ಕಚೇರಿಗೆ ಹಂಗಾಮಿ ಕಾನ್ಸಲರ್ ಆಗಿ ಇಕ್ರಮುದ್ದೀನ್ ಕಾಮಿಲ್ ಅವರನ್ನು ನೇಮಕ ಮಾಡಿದೆ.
ಭಾರತದಲ್ಲಿನ ತನ್ನ ಕಾನ್ಸುಲೇಟ್‌ಗೆ ತಾಲಿಬಾನ್ ಸರ್ಕಾರ ಇದೇ ಮೊದಲ ಬಾರಿಗೆ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ನೂತನ ಕಾನ್ಸಲರ್ ನೇಮಕದ ಬಗ್ಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾಮಿಲ್ ಅವರನ್ನು ಕಾನ್ಸಲರ್ ಆಗಿ ನೇಮಕ ಮಾಡಿರುವ ಬಗ್ಗೆ ಅಫ್ಗಾನಿಸ್ತಾನದ ವಿದೇಶಾಂಗ ಇಲಾಖೆ ಘೋಷಣೆ ಮಾಡಿದೆ ಎಂದು ತಾಲಿಬಾನ್ ನಿಯಂತ್ರಣದಲ್ಲಿರುವ ಬಖ್ತಾರ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಸ್ತುತ ಮುಂಬೈನಲ್ಲೇ ಇರುವ ಕಾಮಿಲ್, ಅಫ್ಗಾನಿಸ್ತಾನದ ರಾಜತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ವೃದ್ಧಿಸುವ ಮತ್ತು ವಿದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ತಾಲಿಬಾನ್ ಈ ನೇಮಕ ಮಾಡಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.