ಬೆಂಗಳೂರು: ನಾನು ಭಾರತದ ಮುಸ್ಲಿಂ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಈ ದೇಶದಲ್ಲಿರುವ ಎಲ್ಲ ಧರ್ಮದವರನ್ನೂ ಪ್ರೀತಿಸುತ್ತೇನೆ. ಒಗ್ಗಟ್ಟಾಗಿರುವುದು ನನಗಿಷ್ಟ.ನನ್ನ ಜತೆ ಮಾತನಾಡಿ, ಮುಸ್ಲಿಮರ ಜತೆ ಮಾತನಾಡಿ ಎಂಬ ಬರಹದೊಂದಿಗೆ #TalkToAMuslim ಎಂಬ ಹ್ಯಾಶ್‍ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.
ಯಾಕೆ ಈ ಹ್ಯಾಶ್ ಟ್ಯಾಗ್?
ದೇಶದಲ್ಲಿನ ಜಾತಿ ಧರ್ಮಗಳ ವಿರುದ್ಧ ನಡೆಯುವ ಸಂಘರ್ಷವನ್ನು ನಿರ್ಮೂಲನೆ ಮಾಡುವುದಕ್ಕಾಗಿ ಈ ರೀತಿಯ ಅಭಿಯಾನವೊಂದು ಟ್ವಿಟರ್‌ನಲ್ಲಿ ಆರಂಭವಾಗಿದೆ.ನಟಿ ಗೌಹಾರ್ ಖಾನ್ ಮತ್ತು ಸ್ವರಾ ಭಾಸ್ಕರ್ ಈ ಅಭಿಯಾನದಲ್ಲಿ ಭಾಗಿಯಾಗಿದ್ದು, ಮುಸ್ಲಿಂ ಸಮುದಾಯದವರ ಬಗ್ಗೆ ಭೇದಭಾವ ಬೇಡ ಎಂದು ಸಾರುವ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
Words of a common Indian citizen. #TalkToAMuslim https://t.co/aMPkhE66L7
ಭಾರತದಲ್ಲಿ ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯ ಮತ್ತು ಹಿಂದೂಗಳ ನಡುವೆ ದ್ವೇಷ ಬಿತ್ತುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಲವಾರು ರಾಜಕಾರಣಿಗಳು ಇಂಥಾ ಸಮುದಾಯಗಳನ್ನು ವೋಟ್ ಬ್ಯಾಂಕ್ ಆಗಿ ಪರಿಗಣಿಸಿವೆ.
ಈ ಹಿಂದೆ ಕಥುವಾದಲ್ಲಿ 8ರ ಹರೆಯದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣ ನಡೆದಾಗ ಹಲವಾರು ಬಾಲಿವುಡ್ ನಟ, ನಟಿಯರು "I am a Hindustan. I am Ashamed.#JusticeforOurChild. 8 Years-old Gangraped Murdered in Devisthan Temple #Kathua" ಎಂಬ ಪ್ಲೆಕಾರ್ಡ್ ಹಿಡಿದು ಟ್ವಿಟರ್ ಅಭಿಯಾನ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.