ADVERTISEMENT

ತಮಿಳುನಾಡು: ನಟ ಶರತ್‌ ನೇತೃತ್ವದ AISMK ಪಕ್ಷ ಬಿಜೆಪಿಯಲ್ಲಿ ವಿಲೀನ

ಪಿಟಿಐ
Published 12 ಮಾರ್ಚ್ 2024, 10:15 IST
Last Updated 12 ಮಾರ್ಚ್ 2024, 10:15 IST
<div class="paragraphs"><p>ನಟ ಶರತ್‌ ನೇತೃತ್ವದ&nbsp;AISMK ಪಕ್ಷ&nbsp;ಬಿಜೆಪಿಯೊಂದಿಗೆ ವಿಲೀನ</p></div>

ನಟ ಶರತ್‌ ನೇತೃತ್ವದ AISMK ಪಕ್ಷ ಬಿಜೆಪಿಯೊಂದಿಗೆ ವಿಲೀನ

   

ಚೆನ್ನೈ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳಿನ ಹಿರಿಯ ನಟ, ರಾಜಕಾರಣಿ ಆರ್‌. ಶರತ್‌ ತಮ್ಮ ‘ಅಖಿಲ ಇಂಡಿಯಾ ಸಮಥುವ ಮಕ್ಕಳ್‌ ಕಾಚಿ’(AISMK) (ಅಖಿಲ ಭಾರತ ಸಮಾನತೆ ಪೀಪಲ್ಸ್‌ ಪಾರ್ಟಿ) ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ನೇತೃತ್ವದಲ್ಲಿ ಪಕ್ಷವನ್ನು ವಿಲೀನಗೊಳಿಸಿದ್ದಾರೆ.

ADVERTISEMENT

‘ಮೋದಿ ಅವರು ರಾಷ್ಟ್ರವನ್ನು ಮತ್ತಷ್ಟು ಮುನ್ನಡೆಸುತ್ತಾರೆ. ದೇಶದಲ್ಲಿ ಏಕತೆ, ಆರ್ಥಿಕತೆ ಬೆಳವಣಿಗೆಯಾಗುವಂತೆ ಮಾಡುತ್ತಾರೆ. ಡ್ರಗ್ಸ್ ಪಿಡುಗನ್ನು ಕೊನೆಗಾಣಿಸಿ ಯುವಕರ ಹಿತ ಕಾಪಾಡುವುದು ಮೋದಿಯವರ ನೇತೃತ್ವದಲ್ಲಿ ಸಾಧ್ಯ. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿ, ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೇರುವಂತೆ ಮಾಡಲು ನೆರವಾಗಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಶರತ್‌ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.