ಚೆನ್ನೈ: ನವದಂಪತಿ ತಮ್ಮ ಮಕ್ಕಳಿಗೆನಾಮಕರಣ ಮಾಡುವಾಗ ತಮಿಳು ಹೆಸರನ್ನೇ ಆಯ್ಕೆ ಮಾಡಿ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭಾನುವಾರ ಒತ್ತಾಯಿಸಿದ್ದಾರೆ.
ಯುವಕರು ಮತ್ತು ಯುವತಿಯರನ್ನು ಉದ್ದೇಶಿಸಿ ಅವರು ಈ ಮಾತುಗಳನ್ನು ಹೇಳಿದ್ದು, ಮದುವೆ ಬಳಿಕ, ಮಕ್ಕಳನ್ನು ಹೊಂದುವ ದಂಪತಿ, ಹೆಸರು ಆಯ್ಕೆ ಮಾಡಿಕೊಳ್ಳುವಾಗ ಈ ವಿಚಾರ ಗಮನದಲ್ಲಿ ಇರಲಿ ಎಂದು ಹೇಳಿದ್ದಾರೆ.
ಪಕ್ಷದ ಕಾರ್ಯದರ್ಶಿ ಪೂಚಿ ಎಸ್ ಮುರುಗನ್ ಅವರ ಪುತ್ರಿಯ ವಿವಾಹ ಸಂದರ್ಭದಲ್ಲಿ ಸ್ಟಾಲಿನ್ ಈ ಮಾತುಗಳನ್ನು ಹೇಳಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಯುವಜನತೆ ಮುಂದೆ ಕುಟುಂಬವನ್ನು ಹೊಂದುವಾಗ, ಮಕ್ಕಳ ಹೆಸರಿನಲ್ಲಿ ತಮಿಳು ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಸ್ಟಾಲಿನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.