ADVERTISEMENT

GST ಎಂದರೆ ಬಡವರ ಶೋಷಣೆ, ಮುಂದೆ ಸೆಲ್ಫಿಗೂ ತೆರಿಗೆ ಕಟ್ಟಬೇಕಾಗಬಹುದು; ಸ್ಟಾಲಿನ್

ಪಿಟಿಐ
Published 15 ಏಪ್ರಿಲ್ 2024, 12:24 IST
Last Updated 15 ಏಪ್ರಿಲ್ 2024, 12:24 IST
<div class="paragraphs"><p>ಎಂ.ಕೆ. ಸ್ಟಾಲಿನ್</p></div>

ಎಂ.ಕೆ. ಸ್ಟಾಲಿನ್

   

ಪಿಟಿಐ ಚಿತ್ರ

ಚೆನ್ನೈ: ಜಿಎಸ್‌ಟಿ ಎಂದರೆ ಬಡವರ ಶೋಷಣೆಯಾಗಿದೆ ಎಂದಿರುವ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮುಂದೆ ಸೆಲ್ಫಿ ತೆಗೆದುಕೊಳ್ಳುವುದು ಸಹ ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆಯೇ ಎಂಬುದನ್ನು ತಿಳಿಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ADVERTISEMENT

‘ಹೋಟೆಲ್‌ನಿಂದ ದ್ವಿಚಕ್ರ ವಾಹನದ ರಿಪೇರಿವರೆಗೆ’ ಎಲ್ಲದರ ಮೇಲೂ ಜಿಎಸ್‌ಟಿ ಕಾಯ್ದೆ ಅಡಿ ತೆರಿಗೆ ವಿಧಿಸಲು ಅನುವು ಮಾಡಿಕೊಡಲಾಗಿದೆ ಎಂದು ದೂರಿದರು.

‘ಹೋಟೆಲ್‌ಗಳ ಬಿಲ್‌ನಲ್ಲಿಯೂ ಜಿಎಸ್‌ಟಿ ಕಂಡು ಮಧ್ಯಮ ವರ್ಗದ ಜನರು ಇದೊಂದು #GabbarSinghTax ಎಂದು ಗೋಳಾಡುತ್ತಿದ್ದಾರೆ. ಮುಂದೇನು? ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಜಿಎಸ್‌ಟಿ ಅನ್ವಯವಾಗಲಿದೆಯೇ? ₹1.45 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆಯನ್ನು ಮನ್ನಾ ಮಾಡಿದ ಕೇಂದ್ರ ಸರ್ಕಾರವು ಬಡವರ ಮೇಲೆ ಕೊಂಚವಾದರೂ ಕನಿಕರ ತೋರಬಾರದೇ? ಶೇಕಡ 66ರಷ್ಟು ತೆರಿಗೆ ಸಾಮಾನ್ಯ ಜನರಿಂದ ಬರುತ್ತದೆ. ಶೇಕಡ 33ರಷ್ಟು ತೆರಿಗೆಯನ್ನು ಮಧ್ಯಮ ವರ್ಗದ ಜನ ಕಟ್ಟುತ್ತಾರೆ. ಕೇವಲ ಶೇಕಡ 3 ರಷ್ಟು ತೆರಿಗೆ ಮಾತ್ರ ಆಗರ್ಭ ಶ್ರೀಮಂತರಿಂದ ಬರುತ್ತದೆ. ಈ ರೀತಿಯ ಬಡವರ ಶೋಷಣೆಯನ್ನು ತಪ್ಪಿಸಲು ಇಂಡಿಯಾ ಬಣಕ್ಕೆ ಮತ ಹಾಕಿ’ ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.