ADVERTISEMENT

ಕೋವಿಡ್‌: ತಮಿಳುನಾಡಲ್ಲಿ ಅನಾಥ ಮಕ್ಕಳಿಗೆ ₹ 5 ಲಕ್ಷ ನೆರವು, ಉಚಿತ ಶಿಕ್ಷಣ

ಪಿಟಿಐ
Published 29 ಮೇ 2021, 11:58 IST
Last Updated 29 ಮೇ 2021, 11:58 IST
ಎಂ.ಎ.ಸ್ಟಾಲಿನ್
ಎಂ.ಎ.ಸ್ಟಾಲಿನ್   

ಚೆನ್ನೈ: ಕೋವಿಡ್‌ನಿಂದ ತಂದೆ–ತಾಯಿ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ₹ 5 ಲಕ್ಷ ನೆರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪ್ರಕಟಿಸಿದ್ದಾರೆ. ಅಲ್ಲದೆ, ಪದವಿ ಹಂತದವರೆಗೂ ಅವರ ಶಿಕ್ಷಣದ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಇಂಥ ಮಕ್ಕಳನ್ನು ಗುರುತಿಸಿ, ಅಗತ್ಯ ನೆರವು ಒದಗಿಸುವ ಸಲುವಾಗಿ ಈಗಾಗಲೇ ಜಿಲ್ಲಾ ಹಂತದಲ್ಲಿ ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಶನಿವಾರ ಹಿರಿಯ ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸಭೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅಲ್ಲದೆ, ಕೋವಿಡ್‌ ಸೋಂಕಿನಿಂದ ತಂದೆ ಅಥವಾ ತಾಯಿ ಕಳೆದುಕೊಂಡಿದ್ದ ಸಂದರ್ಭದಲ್ಲಿ ಮಗುವಿನ ಹೆಸರಲ್ಲಿ ₹ 3 ಲಕ್ಷ ಠೇವಣಿ ಇಡಲಾಗುವುದು. ಇಬ್ಬರನ್ನು ಕಳೆದುಕೊಂಡಿದ್ದಲ್ಲಿ ಪೋಷಕರ ಸುಪರ್ದಿಯಲ್ಲಿ ಬೆಳೆಯಲು ಮಗುವಿಗೆ 18 ವರ್ಷ ಆಗುವವರೆಗೂ ಮಾಸಿಕ ₹ 3 ಸಾವಿರ ಭತ್ಯೆ ನೀಡಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.