ಚೆನ್ನೈ: ತಮಿಳುನಾಡಿನಲ್ಲಿ ಗುರುವಾರ 33 ಓಮೈಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ನೆರೆಯ ರಾಜ್ಯವು ಓಮೈಕ್ರಾನ್ ಪ್ರಕರಣಗಳಲ್ಲಿ ದೊಡ್ಡ ಜಿಗಿತ ಕಂಡಿದೆ.
ಕೋವಿಡ್‌ಗೆ ಒಳಗಾದವರಿಂದ ಸಂಗ್ರಹಿಸಿದ್ದ ಮಾದರಿಗಳನ್ನು ವಂಶವಾಹಿ ಅಧ್ಯಯನಕ್ಕೆ (ಜಿನೊಮ್ ಸೀಕ್ವೆನ್ಸ್) ಕಳುಹಿಸಲಾಗಿತ್ತು. ಈ ವೇಳೆ 33 ಮಂದಿಗೆ ಕೊರೊನಾದ ರೂಪಾಂತರಿ ತಳಿ ಓಮೈಕ್ರಾನ್‌ನ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಸಚಿವ ಮ. ಸುಬ್ರಮಣಿಯನ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಈ 33 ಪ್ರಕರಣಗಳೊಂದಿಗೆ ತಮಿಳುನಾಡಿನ ಒಟ್ಟಾರೆ ಓಮೈಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.