ADVERTISEMENT

ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ ಕಚೇರಿಗೆ ಭೇಟಿ ನೀಡಿದ ತಮಿಳುನಾಡು CM ಸ್ಟಾಲಿನ್

ಪಿಟಿಐ
Published 31 ಆಗಸ್ಟ್ 2024, 9:46 IST
Last Updated 31 ಆಗಸ್ಟ್ 2024, 9:46 IST
   

ಚೆನ್ನೈ: ಅಮೆರಿಕ ಪ್ರವಾಸ ಕೈಗೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌, ಟೆಕ್ ದೈತ್ಯ ಕಂಪನಿಗಳಾದ ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಚೇರಿಗೆ ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಈ ಕಂಪನಿಗಳ ಜೊತೆ ತಮಿಳುನಾಡಿನ ಹೂಡಿಕೆ ಮತ್ತು ಪಾಲುದಾರಿಕೆ ಅವಕಾಶಗಳ ಕುರಿತು ಅವರು ಚರ್ಚಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ‘ವಿವಿಧ ಅವಕಾಶಗಳು ಮತ್ತು ಪಾಲುದಾರಿಕೆಗಳ ಬಗ್ಗೆ ಚರ್ಚಿಸಲಾಗಿದೆ. ಕಂಪನಿಗಳ ಜೊತೆ ಪಾಲುದಾರಿಕೆಯನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಏಷ್ಯಾದ ಅಭಿವೃದ್ಧಿಯ ಎಂಜಿನ್‌ ಆಗಿ ತಮಿಳುನಾಡನ್ನು ನಿರ್ಮಿಸಬೇಕಿದೆ’ ಎಂದರು.

ತಮಿಳುನಾಡಿಗೆ ವಿದೇಶಿ ಹೂಡಿಕೆ ಆಕರ್ಷಿಸುವ ಸಲುವಾಗಿ ಎಂ.ಕೆ. ಸ್ಟಾಲಿನ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.