ತಮಿಳುನಾಡು: ಇನ್ನೇನು ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಬ್ಬದ ಸಂದರ್ಭದಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಉಡುಗೊರೆ, ಬೋನಸ್ ಕೊಡುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ.
ತಮಿಳುನಾಡಿನ ಟೀ ಎಸ್ಟೇಟ್ ಮಾಲೀಕರೊಬ್ಬರು ತಮ್ಮ 15 ಜನ ಕೆಲಸಗಾರರಿಗೆ ದೀಪಾವಳಿ ಉಡುಗೊರೆಯಾಗಿ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ನೀಡಿದ್ದಾರೆ.
ನೀಲಗಿರಿ ಜಿಲ್ಲೆಯ ಕೊಟಗಿರಿ ನಗರದಲ್ಲಿರುವ ಟೀ ಎಸ್ಟೇಟ್ ಮಾಲೀಕರು ತಮ್ಮ ಸಿಬ್ಬಂದಿಗೆ ಬೈಕ್ ಕೀಗಳನ್ನು ಹಸ್ತಾಂತರಿಸಿದ ವಿಡಿಯೊವನ್ನು ಪಿಟಿಐ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
42 ವರ್ಷದ ಟೀ ಮಾಲೀಕರು ಕೀ ಕೊಡುತ್ತಿದ್ದಂತೆಯೇ ಸಿಬ್ಬಂದಿಯ ಮುಖದಲ್ಲಿ ಖುಷಿ ತುಂಬಿತ್ತು.
‘ಈ ರೀತಿಯ ಉಡುಗೊರೆಯನ್ನು ನಾವು ಎಂದೂ ಬಯಸಿರಲಿಲ್ಲ. ನಾವಾಗಿಯೇ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನಮ್ಮ ಮಾಲೀಕರಿಂದ ಅದು ಸಿಕ್ಕಿತು. ಮಾಲೀಕರೊಂದಿಗೆ ಹಾಗೂ ಅವರ ತಂಡದೊಂದಿಗೆ ಕೆಲಸ ಮಾಡುತ್ತಿರುವುದೇ ನಮ್ಮ ಭಾಗ್ಯ’ ಎಂದು ಸಿಬ್ಬಂದಿಯೊಬ್ಬರು ಪಿಟಿಐಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಈ ಹಿಂದೆ ಹರಿಯಾಣದ ಮಿಟ್ಸ್‌ಕಾರ್ಟ್ ಕಂಪನಿಯು ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಕಾರು ನೀಡಿತ್ತು. ಕಂಪನಿಯ ಮುಖ್ಯಸ್ಥ ಎಂ.ಕೆ ಭಾಟಿಯಾ ಅವರು 12 ಉದ್ಯೋಗಿಗಳಿಗೆ ಹೊಸ ಟಾಟಾ ಪಂಚ್ ಕಾರಿನ ಕೀ ನೀಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.