ADVERTISEMENT

YSRCPಗೆ ಮತ ಹಾಕಿದ್ದಕ್ಕಾಗಿ ಮಾಜಿ ಸೈನಿಕನ ಕುಟುಂಬಕ್ಕೆ ಟಿಡಿಪಿ ಕಿರುಕುಳ: ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2024, 10:40 IST
Last Updated 27 ಜುಲೈ 2024, 10:40 IST
<div class="paragraphs"><p>ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು</p></div>

ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು

   

ಅಮರಾವತಿ (ಆಂಧ್ರಪ್ರದೇಶ): ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕಾಗಿ ಮಾಜಿ ಸೈನಿಕನ ಕುಟುಂಬಕ್ಕೆ ಆಡಳಿತಾರೂಢ ತೆಲುಗು ದೇಶಂ (ಟಿಡಿ‍ಪಿ) ಪಕ್ಷದ ಗೂಂಡಾಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಸಂಬಂಧ ವೈಎಸ್‌ಆರ್‌ಸಿಪಿಯ ಅಧಿಕೃತ ‘ಎಕ್ಸ್‌’ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ವೈಎಸ್‌ಆರ್‌ಸಿಪಿಗೆ ಮತ ಹಾಕಿದ್ದರಿಂದ ಮಾಜಿ ಸೈನಿಕ ಪತಿವಾಡ ವೆಂಕುನಾಯ್ಡು ಅವರ ಕುಟುಂಬಕ್ಕೆ ಟಿಡಿಪಿ ನಾಯಕರು ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದೆ.

ADVERTISEMENT

‘ಅಕ್ರಮ ತೆರವು ಕಾರ್ಯಾಚರಣೆಯ ಭಾಗವಾಗಿ ವೆಂಕುನಾಯ್ಡು ಅವರ ಮನೆಯನ್ನು ಕೆಡವಲು ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ಗ್ರಾಮಸ್ಥರು ತೆರವು ಕಾರ್ಯಾಚರಣೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವಿಡಿಯೊವನ್ನು ಸಿಎಂ ಚಂದ್ರಬಾಬು ನಾಯ್ಡು ಅವರ ಅಧಿಕೃತ ಖಾತೆಗೆ ಟ್ಯಾಗ್ ಮಾಡಿರುವ ವೈಎಸ್‌ಆರ್‌ಸಿಪಿ, ಆಂಧ್ರ ಪ್ರದೇಶದಲ್ಲಿ ಈ ರೀತಿಯ ದೌರ್ಜನ್ಯಗಳು ಎಷ್ಟು ದಿನ ಮುಂದುವರಿಯುತ್ತದೆ?’ #SaveAPFromTDP ಎಂದು ಟೀಕಿಸಿದೆ.

ಪ್ರಕರಣ ಸಂಬಂಧ ತಕ್ಷಣಕ್ಕೆ ಟಿಡಿಪಿ, ಜನಸೇನಾ, ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆಂಧ್ರಪ್ರದೇಶದಲ್ಲಿ ‘ರಾಜಕೀಯ ಹಿಂಸಾಚಾರ’ ನಡೆಯುತ್ತಿದೆ ಎಂದು ಆರೋಪಿಸಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಈಚೆಗೆ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ್ದರು. ‘ಇಂಡಿಯಾ’ ಮೈತ್ರಿಕೂಟದ ಹಲವು ಸದಸ್ಯರು, ಎಐಎಡಿಎಂಕೆ ನಾಯಕರು ಬೆಂಬಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.