ಸಂತ ಕಬೀರ್ ನಗರ: ಸಂತ ಕಬೀರ್ ದಾಸ್ ಅವರ ಜೀವನವು ಮಾನವ ಸದ್ಗುಣಗಳ ದ್ಯೋತಕವಾಗಿದೆ. ಅವರ ಬೋಧನೆಗಳು ಆಧುನಿಕ ದಿನಗಳಿಗೂ ಪ್ರಸ್ತುತವಾಗಿವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದರು.
ಸ್ವದೇಶ್ ದರ್ಶನ್ ಯೋಜನೆಯಡಿ ನಿರ್ಮಾಣಗೊಂಡಿರುವ ಸಂತ ಕಬೀರ್ ಅಕಾಡೆಮಿ ಮತ್ತು ಸಂಶೋಧನಾ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮಗಹರ್‌ನಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಕೋವಿಂದ್ ಭಕ್ತಿ ಚಳುವಳಿಯ ಸಂತನಿಗೆ ಗೌರವ ಸಲ್ಲಿಸಿದರು. ಮಝಾರ್‌ನಲ್ಲಿ ಚಾದರ್ ಅರ್ಪಿಸಿದರು. ಬಳಿಕ ಕಬೀರ್ ಚೌರಾ ಧಾಮ್‌ನ ಆವರಣದಲ್ಲಿ ಗಿಡ ನೆಟ್ಟರು.
'ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಿದ್ದ ಸಂತ ಕಬೀರ್ ಅಕಾಡೆಮಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸುತ್ತಿರುವುದಕ್ಕೆ ಸಂತೋಷವಾಗಿದೆ. 650 ವರ್ಷಗಳ ನಂತರವೂ ಕಬೀರ್ ಅವರ ಬೋಧನೆಗಳು ಪ್ರಸ್ತುತವಾಗಿವೆ. ಅವರ ಬದುಕು ಮಾನವ ಸದ್ಗುಣಗಳ ದ್ಯೋತಕವಾಗಿವೆ. ಕೋಮು ಸೌಹಾರ್ದತೆಗೆ ಉದಾಹರಣೆಗಳಾಗಿವೆ' ಎಂದು ಕೋವಿಂದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.