ADVERTISEMENT

ಸಂಭಾವನೆ ಹೆಚ್ಚಳವಾದರೆ ಕ್ರಿಕೆಟ್ ಕೋಚ್ ರವಿಶಾಸ್ತ್ರಿಗೆ ಸಿಗಲಿದೆ ₹ 10 ಕೋಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 12:21 IST
Last Updated 9 ಸೆಪ್ಟೆಂಬರ್ 2019, 12:21 IST
   

ನವದೆಹಲಿ: ಟೀಮ್ ಇಂಡಿಯಾದ ಪ್ರಮುಖ ಕೋಚ್ ರವಿಶಾಸ್ತ್ರಿ ಸಂಭಾವನೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮರುನೇಮಕಗೊಂಡ ನಂತರ ಈ ಬಾರಿಯ ಒಪ್ಪಂದದಂತೆ ಹಿಂದೆ ಪಡೆಯುತ್ತಿದ್ದ ಸಂಭಾವನೆಗಿಂತಶೇ.20ರಷ್ಟು ಹೆಚ್ಚು ಸಂಭಾವನೆ ಪಡೆಯಲಿದ್ದಾರೆ. ಇದರಿಂದಾಗಿ ವಾರ್ಷಿಕ ₹ 9.5 ಕೋಟಿಯಿಂದ₹ 10 ಕೋಟಿ ಪಡೆಯಲಿದ್ದಾರೆ.

ಈ ಹಿಂದಿನ ಒಪ್ಪಂದದ ಪ್ರಕಾರ ರವಿಶಾಸ್ತ್ರಿ₹ 8 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಹೊಸದಾಗಿ ಒಪ್ಪಂದ ಮಾಡಿಕೊಂಡಿದ್ದು, ಸಣ್ಣಪುಟ್ಟ ಬದಲಾವಣೆಯೊಂದಿಗೆ ಹಳೆಯತಂಡವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಸ ಒಪ್ಪಂದಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ.

ADVERTISEMENT

ಸಂಭಾವನೆ ಹೆಚ್ಚಳವಾದರೆ ರವಿಶಾಸ್ತ್ರಿ ಅವರೊಂದಿಗೆ ಅವರ ಜೊತೆಯಲ್ಲಿರುವ ಇತರೆ ಸದಸ್ಯರಿಗೂ ಹೆಚ್ಚಳವಾಗಲಿದೆ. ಬೌಲಿಂಗ್ ಕೋಚ್ ಭರತ್ ಅರುಣ್ ₹ 3.5, ಫೀಲ್ಡಿಂಗ್ ಕೋಚ್ ಆರ್ .ಶ್ರೀಧರ್₹3.5 ಕೋಟಿ, ಬ್ಯಾಟಿಂಗ್ ಕೋಚ್ ಸ್ಥಾನದಲ್ಲಿದ್ದ ಸಂಜಯ್ ಬಂಗಾರ್ ಬದಲಿಗೆಅವಕಾಶ ಪಡೆದಿರುವ ವಿಕ್ರಮ್ ರಾಥೋಡ್ ₹ 2.5 ರಿಂದ₹ 3 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವ ಸಂಭಾವನೆ ನೀಡುತ್ತದೆಯೋ ಇನ್ನೂ ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.