ADVERTISEMENT

ನಕಲಿ ಸಾಕ್ಷ್ಯ ಸೃಷ್ಟಿ : FIR ರದ್ದಿಗೆ ಗುಜರಾತ್‌ ಹೈಕೋರ್ಟ್‌ಗೆ ತೀಸ್ತಾ ಮನವಿ

ಪಿಟಿಐ
Published 1 ಆಗಸ್ಟ್ 2023, 2:56 IST
Last Updated 1 ಆಗಸ್ಟ್ 2023, 2:56 IST
ತೀಸ್ತಾ ಸೆಟಲ್ವಾಡ್
ತೀಸ್ತಾ ಸೆಟಲ್ವಾಡ್   

ಅಹಮದಾಬಾದ್‌: 2002ರ ಗುಜರಾತ್‌ ಗಲಭೆ ಸಂಬಂಧ ನಕಲಿ ಪುರಾವೆಗಳನ್ನು ಸೃಷ್ಠಿ ಮಾಡಿದ್ದಾರೆ ಎಂದು ಆರೋ‍ಪಿಸಿ ನಗರದ ಕ್ರೈಂ ಬ್ರಾಂಚ್‌ ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಗುಜರಾತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಪ್ರಕರಣದಿಂದ ತಮ್ಮನ್ನು ಬಿಡುಗಡೆಗೊಳಿಸಬೇಕು ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಸೆಷನ್ಸ್‌ ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಜಾಮೀನು ನೀಡಲು ಗುಜರಾತ್ ಹೈಕೋರ್ಟ್‌ ನಿರಾಕರಿಸಿತ್ತು. ಸದ್ಯ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಮಾಡಬೇಕು ಎಂದು ಅವರು ಗುಜರಾತ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಕೆಲ ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ADVERTISEMENT

ತೀಸ್ತಾ ಮೇಲಿರುವ ಆರೋಪ ಏನು?

2002ರ ಗೋಧ್ರೋತ್ತರ ಗಲಭೆಯಲ್ಲಿ ಅಮಾಯಕರನ್ನು ಸಾಕ್ಷಿಗಳನ್ನಾಗಿ ಸೃಷ್ಠಿ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ತೀಸ್ತಾ ಹಾಗೂ ಇನ್ನಿಬ್ಬರನ್ನು 2022ರ ಜೂನ್‌ನಲ್ಲಿ ಕ್ರೈ ಬ್ರಾಂಚ್‌ ಬಂಧಿಸಿತ್ತು. ಗುಜರಾತ್‌ನ ಮಾಜಿ ಪೊಲೀಸ್‌ ಮಹಾನಿರ್ದೇಶಕ ಆರ್.ಬಿ ಶ್ರೀಕುಮಾರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‌ ಭಟ್‌ ಇನ್ನಿಬ್ಬರು.

ತೀಸ್ತಾ ಅವರ ಮೇಲೆ ಐಪಿಸಿಯ 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ) ಹಾಗೂ ಸೆಕ್ಷನ್ 194ರಡಿ (ಮರಣದಂಡನೆ ಅಪರಾಧದ ಶಿಕ್ಷೆಯನ್ನು ಪಡೆಯುವ ಉದ್ದೇಶದಿಂದ ಸುಳ್ಳು ಪುರಾವೆಗಳನ್ನು ನೀಡುವುದು) ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.