ADVERTISEMENT

ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್ ಸಂಘಟನೆ ನಿಷೇಧ– ಅಮಿತ್‌ ಶಾ

ಪಿಟಿಐ
Published 31 ಡಿಸೆಂಬರ್ 2023, 10:06 IST
Last Updated 31 ಡಿಸೆಂಬರ್ 2023, 10:06 IST
<div class="paragraphs"><p>ಅಮಿತ್‌ ಶಾ (ಸಂಗ್ರಹ ಚಿತ್ರ)</p></div>

ಅಮಿತ್‌ ಶಾ (ಸಂಗ್ರಹ ಚಿತ್ರ)

   

ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್( Tehreek-E-Hurriyat)​ ಸಂಘಟನೆಯನ್ನು ಕೇಂದ್ರ ಸರ್ಕಾರ ಭಾನುವಾರ ನಿಷೇಧಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಲು, ಇಸ್ಲಾಮಿಕ್‌ ಆಡಳಿತ ಸ್ಥಾಪಿಸಲು ಈ ಸಂಘಟನೆ ಕೆಲಸ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ತಕ್ಷಣವೇ ಬ್ಯಾನ್‌ ಮಾಡಲಾಗುವುದು ಎಂದು ಅಮಿತ್‌ ಶಾ ತಿಳಿಸಿದ್ದಾರೆ. 

ಈ ಹಿಂದೆ ತೆಹ್ರೀಕ್​-ಎ-ಹುರಿಯತ್ ಸಂಘಟನೆಯು ಸೈಯದ್ ಅಲಿ ಶಾ ಗಿಲಾನಿ ನೇತೃತ್ವದಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು. ಗಿಲಾನಿ ಹತ್ಯೆ ಬಳಿಕ ಮತ್ತೊಬ್ಬ ಪ್ರತ್ತಯೇಕವಾದಿ ಮಸರತ್ ಆಲಂ ಭಟ್ ಉತ್ತರಾಧಿಕಾರಿಯಾಗಿದ್ದಾನೆ. ಈತ ಕೂಡ ಭಾರತ ವಿರೋಧಿ ಮತ್ತು ಪಾಕಿಸ್ತಾನ ಪರ ಪ್ರಚಾರದ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ.

ತೆಹ್ರೀಕ್​ ಎ ಹುರಿಯತ್ ಸಂಘಟನೆಯನ್ನು ದೀರ್ಘಕಾಲ ಪರಿಶೀಲನೆ ನಡೆಸಿ ಬಳಿಕ ಬ್ಯಾನ್‌ ಮಾಡಲಾಗಿದೆ. ಈ ಕ್ರಮ ಮುಂದಿನ 5 ವರ್ಷಗಳ ವರೆಗೆ ಇರಲಿದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.